News Kannada
Wednesday, October 05 2022

ಮನರಂಜನೆ

ಗೂಗಲ್ ನಿಂದ ಡೂಡಲ್ ಗೌರವಕ್ಕೆ ಪಾತ್ರರಾದ ಕನ್ನಡದ ನಟ ಸಾರ್ವಭೌಮ ಡಾ.ರಾಜ್ ಕುಮಾರ್! - 1 min read

Photo Credit :

ಗೂಗಲ್ ನಿಂದ ಡೂಡಲ್ ಗೌರವಕ್ಕೆ ಪಾತ್ರರಾದ ಕನ್ನಡದ ನಟ ಸಾರ್ವಭೌಮ ಡಾ.ರಾಜ್ ಕುಮಾರ್!

ಬೆಂಗಳೂರು: ಭಾರತೀಯ ಚಿತ್ರರಂಗ ಕಂಡ ಮೇರು ನಟ ಕನ್ನಡದ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ 88ನೇ ಜನ್ಮ ದಿನಾಚರಣೆ ನಿಮಿತ್ತ ಖ್ಯಾತ ಸರ್ಚ್ ಎಂಜಿನ್ ಗೂಗಲ್ ಡೂಡಲ್ ಬಿಡಿಸುವ ಮೂಲಕ ಗೌರವ ಸೂಚಿಸಿದೆ.

Google honours Kannada superstar Rajkumar with doodle-1
ಗೂಗಲ್ ಡೂಡಲ್’ನಲ್ಲಿ ತುಂಬಿರುವ ಚಿತ್ರಮಂದಿರ ಜೊತೆ ದೊಡ್ಡ ಪರದೆಯ ಮೇಲೆ ಡಾ.ರಾಜ್ಕುಮಾರ್ ಅವರು ನಗೆ ಬೀರುತ್ತಿದ್ದಾರೆ. ಅಣ್ಣಾವ್ರ ಹಿಂದೆ ತಿಳಿ ನೀಲಿ ಬಣ್ಣದಲ್ಲಿ ‘ಗೂಗಲ್’ ಎಂದು ಕಾಣಿಸುತ್ತಿದೆ. ಸರ್ಚ್ ಇಂಜಿನ್ ಗೂಗಲ್ ಪ್ರಪಂಚದ ಗಣ್ಯ ವ್ಯಕ್ತಿಗಳು, ಶ್ರೇಷ್ಠ ನಾಯಕರು, ನಟರು ಸ್ಮರಣಾರ್ಥ ಹಾಗೂ ವಿಶೇಷ ದಿನಗಳಂದು ಈ ರೀತಿ ವಿಶೇಷ ಚಿತ್ರಗಳನ್ನು ಪ್ರಕಟಿಸುವ ಮೂಲಕ ಗೌರವ ಸೂಚಿಸುತ್ತದೆ.

ಏಪ್ರಿಲ್ 24 1929ರಲ್ಲಿ ಜನಿಸಿದ್ದ ಡಾ.ರಾಜ್ ಕುಮಾರ್ ಅವರು ತಮ್ಮ ಅಮೋಘ ಅಭಿನಯದ ಮೂಲಕ ಇಡೀ ಭಾರತೀಯ ಚಿತ್ರರಂಗವನ್ನು ಸೆಳೆದಿದ್ದರು. ಇಂತಹ ಮೇರು ನಟನಿಗೆ ಗೂಗಲ್ ಡೂಡಲ್ ಮೂಲಕ ಗೌರವ ಸಲ್ಲಿಕೆ  ಮಾಡಿದ್ದು, ತೈಲವರ್ಣದಲ್ಲಿ ರಚಿಸಿರುವಂತೆ ಕಾಣುವ ಡಾ. ರಾಜ್ ಕುಮಾರ್ ಅವರ ಭಾವಚಿತ್ರವನ್ನು ಡೂಡಲ್ ನಲ್ಲಿ ಉಪಯೋಗಿಸಲಾಗಿದೆ. ಚಿತ್ರ ಮಂದಿರದ ತೆರೆಯ ಮೇಲೆ ಡಾ. ರಾಜ್ ಕುಮಾರ್ ಅವರ ನಗುಮೊಗ  ಕಂಗೊಳಿಸುತ್ತಿರುವಂತೆ ಡೂಡಲ್ ರಚಿಸಲಾಗಿದ್ದು, ಅದನ್ನು ನೂರಾರು ಪ್ರೇಕ್ಷಕರು ನೋಡುತ್ತಿರುವಂತೆ ಬಿಂಬಿಸಲಾಗಿದೆ. ಡೂಡಲ್ ಹಿಂಭಾಗದಲ್ಲಿ ಕಂಡೂ ಕಾಣಿಸದಂತೆ ಗೂಗಲ್ ರಚನೆ ಮಾಡಲಾಗಿದೆ.

See also  ಕಾಲಾ ಚಿತ್ರ ಬಿಡುಗಡೆಗೆ ಸೂಕ್ತ ಭದ್ರತೆ ಒದಗಿಸಲು ಹೈಕೋರ್ಟ್ ಆದೇಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು