ಬೆಂಗಳೂರು: ಬಾಹುಬಲಿ 2 ಚಿತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ 1,040 ರುಪಾಯಿ ಕೊಟ್ಟು ವೀಕ್ಷಿಸಿರುವುದು ಇದೀಗ ಎಲ್ಲೆಡೆ ಟೀಕೆಗಳಿಗೆ ಗುರಿಯಾಗಿದೆ.
ಹೌದು… ಮಲ್ಟಿಫ್ಲೆಕ್ಸ್ ಗಳಲ್ಲಿ ದುಬಾರಿ ಬೆಲೆಯನ್ನು ನಿಗದಿಪಡಿಸಲಾಗುತ್ತಿದ್ದು ಇನ್ನುಂದೆ ಎಲ್ಲಾ ಮಲ್ಟಿಫ್ಲೆಕ್ಸ್ ಗಳ ಟಿಕೆಟ್ ದರ 200 ರುಪಾಯಿಗೆ ಮಿತಿಗೊಳಿಸುವುದಾಗಿ ಕಳೆದ ಬಜೆಟ್ ನಲ್ಲಿ ಸಿದ್ದರಾಮಯ್ಯ ಅವರು ಹೇಳಿದ್ದು, ಇದು ಮೇ 1 ರಿಂದ ಅನ್ವಯವಾಗಲಿದೆ ಎಂದು ಹೇಳಿದ್ದ ಅವರೇ ಮೇ 1ರಂದೇ 1,040 ರುಪಾಯಿಯಂತೆ 50 ಟಿಕೇಟ್ ಗಳನ್ನು ಬುಕ್ ಮಾಡಿ ಚಿತ್ರ ವೀಕ್ಷಿಸಿದ್ದು ಇದೀಗ ಬಾರಿ ಚರ್ಚೆಗೆ ಕಾರಣವಾಗಿದೆ.
ಬಾಹುಬಲಿ 2 ಚಿತ್ರವನ್ನು ಓರಿಯನ್ ಮಾಲ್ ನಲ್ಲಿ ಸಿದ್ದರಾಮಯ್ಯ ಅವರು ಪುತ್ರ ಡಾ. ಯತೀಂದ್ರ ಹಾಗೂ ಮೊಮ್ಮಗ ಭವನ್ ಸೇರಿದಂತೆ 48 ಮಂದಿ ಜತೆ ವೀಕ್ಷಿಸಿದ್ದು, ಪರ ಭಾಷಾ ಚಿತ್ರವೊಂದಕ್ಕೆ 1,040 ರುಪಾಯಿ ಕೊಟ್ಟು ಚಿತ್ರ ನೋಡಿರುವುದಕ್ಕೆ ಕನ್ನಡಿಗರು ಟ್ವಿಟ್ಟರ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.