ಲಾಸ್ ಏಂಜಲೀಸ್: ರಾಕಿ ಮತ್ತು ದ ಕರಾಟೆ ಕಿಡ್ ಚಿತ್ರಗಳನ್ನು ನಿರ್ದೇಶಿಸಿದ್ದ ಖ್ಯಾತ ನಿರ್ದೇಶಕ ಜಾನ್ ಜಿ. ಅವಿಲ್ಡ್ ಸನ್ ನಿಧನ ಹೊಂದಿದ್ದಾರೆ. 81 ವರ್ಷ ಪ್ರಾಯದ ಅವರು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ನಿಧನದ ಸುದ್ದಿಯನ್ನು ತಿಳಿಸಿದ ಪುತ್ರ ಆಂಟನಿ ಅವಿಲ್ಟ್ ಸನ್, ತಮ್ಮ ತಂದೆ ಶುಕ್ರವಾರ ಲಾಸ್ ಏಂಜಲೀಸ್ ನಲ್ಲಿ ನಿಧನರಾಗಿದ್ದಾರೆ ಎಂದು ಹೇಳಿದ್ದಾರೆ.
ಅದ್ಭುತ ವ್ಯಕ್ತಿ ಹಾಗೂ ಬಹುಮುಖ ಪ್ರತಿಭೆಯುಳ್ಳವರಾಗಿದ್ದ ಅವರು, ಜಾನ್ ಜಿ ಅವಿಲ್ಡ್ಸನ್ , ರಾಕಿಯಂತಹ ಅತ್ಯಂತ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ್ದರು. ಇವರು ತಮ್ಮ ಉತ್ತಮ ಚಿತ್ರ, ನಿರ್ದೇಶನ, ಸಂಕಲಕ್ಕೆ ಆಸ್ಕರ್ ಪ್ರಶಸ್ತಿ ಗಳಿಸಿದ್ದರು. ಅವಿಲ್ಡ್ ಸನ್ ಮೂವರು ಗಂಡು ಮಕ್ಕಳಾದ ಜೊನತನ್, ಅಶ್ಲೆ ಮತ್ತು ಆಂಟನಿ ಹಾಗೂ ಪುತ್ರಿ ಬ್ರಿಜೆಟ್ ನ್ನು ಅಗಲಿದ್ದಾರೆ.