News Kannada
Saturday, December 03 2022

ಮನರಂಜನೆ

‘ಸಾಹೋ’ ಚಿತ್ರತಂಡದಿಂದ ಅನುಷ್ಕಾಗೆ ಕೋಕ್

Photo Credit :

‘ಸಾಹೋ’ ಚಿತ್ರತಂಡದಿಂದ ಅನುಷ್ಕಾಗೆ ಕೋಕ್

ಬಾಹುಬಲಿ-2′ ಬಿಗ್‌ ಹಿಟ್‌ನೊಂದಿಗೆ ಫೇಮಸ್‌ ಆಗಿದ್ದು ಈ ಚಿತ್ರದಲ್ಲಿ ನಟ ಪ್ರಭಾಸ್‌ ಹಾಗೂ ನಟಿ ಅನುಷ್ಕಾ ಶೆಟ್ಟಿ ಕೆಮೆಸ್ಟ್ರಿ ಸಖತ್‌ ವರ್ಕೌಟ್‌ ಆಗಿತ್ತು.

‘ಬಾಹುಬಲಿ’ ನಂತ್ರ ನಟ ಪ್ರಭಾಸ್ ‘ಸಾಹೋ’ ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ನಟಿಸಲು ಬಾಲಿವುಡ್ನ ಕೆಲ ನಟಿಯರಿಗೆ ಆಫರ್ ನೀಡಿದ್ದರೂ ಕೂಡ ಕೊನೆಗೆ ಅನುಷ್ಕಾ ಶೆಟ್ಟಿಯನ್ನೇ ಸೆಲೆಕ್ಟ್ ಮಾಡಲಾಗಿತ್ತು.

‘ಸಾಹೋ’ ಚಿತ್ರದಿಂದ ಅನುಷ್ಕಾ ಶೆಟ್ಟಿ ಅವರನ್ನು ಕೈಬಿಡಲು ಚಿತ್ರತಂಡ ನಿರ್ಧರಿಸಿದೆಯಂತೆ. ಇದಕ್ಕೆ ಕಾರಣ ಅನುಷ್ಕಾ ಶೆಟ್ಟಿ ತೂಕ. ಈ ಚಿತ್ರಕ್ಕಾಗಿ ತೂಕ ಇಳಿಸಿಕೊಳ್ಳಲು ಸಖತ್ ವರ್ಕೌಟ್ ಮಾಡಿದ್ರೂ ಕೂಡ ಅವರ ತೂಕ ಕಡಿಮೆ ಆಗಿಲ್ವಂತೆ. ಅಗತ್ಯತೆಗಿಂತ 6-5 ಕೆಜಿ ತೂಕ ಹೆಚ್ಚಿದೆಯಂತೆ. ಆದ್ದರಿಂದ ಚಿತ್ರತಂಡ ಅನುಷ್ಕಾಗೆ ಕೋಕ್ ನೀಡಲು ಮುಂದಾಗಿದೆಯೆಂದು ಹೇಳಲಾಗುತ್ತಿದೆ.

‘ಸಾಹೋ’ದಲ್ಲಿಯೂ ಕೂಡ ಈ ಜೋಡಿ ನಟಿಸುತ್ತಿರುವುದು ಅಭಿಮಾನಿಗಳಲ್ಲಿ ಸಂತಸವನ್ನುಂಟು ಮಾಡಿತ್ತು. ಬಾಹುಬಲಿಯಲ್ಲಿ ಇವರಿಬ್ಬರ ನಟನೆಯನ್ನು ಕಣ್ತುಂಬಿಕೊಂಡಿದ್ದ ಪ್ರೇಕ್ಷಕರು ‘ಸಾಹೋ’ ಚಿತ್ರದ ಮೇಲೆ ಸಹಜವಾಗಿ ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಆದರೆ ಸದ್ಯದ ನ್ಯೂಸ್ನಿಂದ ಅಭಿಮಾನಿಗಳ ಈ ನಿರೀಕ್ಷೆಗೆ ತಣ್ಣೀರೆರಚಿದಂತಾಗಿದೆ.

 

 

 

 

See also  ಬಾಲಿವುಡ್ ನ ಜನಪ್ರಿಯ ನಟಿ ಸೋನಾಲಿ ಬೇಂದ್ರೆಗೆ ಕ್ಯಾನ್ಸರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು