News Kannada
Sunday, December 04 2022

ಮನರಂಜನೆ

ಯಾರ ವಿರುದ್ಧವೂ ವೈಯಕ್ತಿಕವಾಗಿ ದೂರು ನೀಡಿಲ್ಲ, ದಿಲೀಪ್ ಅವರ ಬಂಧನ ನನಗೆ ಆಶ್ಚರ್ಯವನ್ನುಂಟುಮಾಡಿದೆ: ಸಂತ್ರಸ್ತ ನಟಿ

Photo Credit :

ಯಾರ ವಿರುದ್ಧವೂ ವೈಯಕ್ತಿಕವಾಗಿ ದೂರು ನೀಡಿಲ್ಲ, ದಿಲೀಪ್ ಅವರ ಬಂಧನ ನನಗೆ ಆಶ್ಚರ್ಯವನ್ನುಂಟುಮಾಡಿದೆ: ಸಂತ್ರಸ್ತ ನಟಿ

ತಿರುವನಂತಪುರ: ಕೇರಳದ ಪ್ರಸಿದ್ಧ ನಟ ದಿಲೀಪ್ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿದ್ದು, ಇದೇ ಮೊದಲ ಬಾರಿಗೆ ಈ ವಿಚಾರವಾಗಿ ಸಂತ್ರಸ್ತ ನಟಿ ಮೌನ ಮುರಿದಿದ್ದಾರೆ.

ದಿಲೀಪ್ ಅವರ ಬಂಧನ ನನ್ನಲ್ಲಿ ಆಶ್ಚರ್ಯವನ್ನು ಮೂಡಿಸಿದೆ. ನಾನು ಯಾರ ವಿರುದ್ಧವೂ ವೈಯಕ್ತಿಕವಾಗಿ ದೂರು ನೀಡಿರಲಿಲ್ಲ. ಎಂದು ಹೇಳಿದ್ದಾರೆ.

ಒಂದು ವೇಳೆ ದಿಲೀಪ್ ಮುಗ್ದರೇ ಆಗಿದ್ದರೆ, ಪ್ರಕರಣದಿಂದ ಹೊರಬರುತ್ತಾರೆ. ಇಲ್ಲದೇ ಹೋದರೂ ಕಾನೂನಿಗೆ ಎಲ್ಲರೂ ಸಮಾನರಾಗಿದ್ದು ತಲೆಬಾಗಲೇಬೇಕಿದೆ. ಸುಖಾಸುಮ್ಮನೆ ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ದಿಲೀಪ್ ಹೇಳುತ್ತಿದ್ದಾರೆ. ಸತ್ಯಾಂಶ ಬಹಿರಂಗಗೊಳ್ಳಬೇಕಿದೆ. ನಾನು ಮತ್ತು ದಿಲೀಪ್ ಹಲವು ಚಿತ್ರಗಳಲ್ಲಿ ನಟಿಸಿದ್ದೆವು. ವೈಯಕ್ತಿಕ ವೈಮಸ್ಯಗಳಿಂದ ನಾವಿಬ್ಬರೂ ದೂರವಾಗಿದ್ದೇವೆ. ಆದರೆ, ನಾನು ಯಾರನ್ನೂ ಉಲ್ಲೇಖಿಸಿ ದೂರಿರಲಿಲ್ಲ. ಹಾಗಿದ್ದರೂ ಸತ್ಯ ಹೊರ ಬರಲೇಬೇಕಿದೆ.

ನನ್ನ ಹಾಗೂ ದಿಲೀಪ್ ನಡುವೆ ರಿಯಲ್ ಎಸ್ಟೇಟ್ ಒಪ್ಪಂದಗಳಿದ್ದವು ಎಂದು ಮಾಧ್ಯಮಗಳಲ್ಲಿ ಬಂದ ಕೆಲ ವರದಿಗಳಲ್ಲಿ ಹೇಳಲಾಗುತ್ತಿದೆ. ಆದರೆ, ನನ್ನ ಹಾಗೂ ದಿಲೀಪ್ ನಡುವೆ ಅಂತಹ ಯಾವುದೇ ಒಪ್ಪಂದಗಳಿರಲಿಲ್ಲ. ಇಷ್ಟೆಲ್ಲಾ ಆದರೂ ನಾನು ಯಾರೊಬ್ಬರ ಮೇಲೂ ಏನನ್ನೂ ಹೇಳಿರಲಿಲ್ಲ. ಆದರೆ, ಕೆಲ ವರದಿಗಳಿಂದಾಗಿ ನಾನು ಸ್ಫಷ್ಟಪಡಿಸುತ್ತಿದ್ದೇನೆ. ನಾನು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಹಾಗೂ ಟ್ವಿಟರ್ ಗಳನ್ನು ಬಳಕೆ ಮಾಡುತ್ತಿಲ್ಲ. ನನ್ನ ಹೆಸರಿನಲ್ಲಿ ಖಾತೆಗಳಾವುದಾದರೂ ಇದ್ದರೆ, ಅದು ನನ್ನದಲ್ಲ ಎಂದು ನಟಿ ಸ್ಪಷ್ಟಪಡಿಸಿದ್ದಾರೆ.

ತಪ್ಪಿತಸ್ಥರಿಗೆ ಮಾತ್ರ ಶಿಕ್ಷೆಯಾಗಲಿ ಪ್ರಕರಣ ಸಂಬಂಧ ಮುಗ್ಧರಿಗೆ ಶಿಕ್ಷೆಯಾಗದರಲಿ, ಎಂದು ನಾನು ಕೇಳಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

See also  ಪ್ರಭಾಸ್ ಅಭಿನಯದ ಸಲಾರ್ ಚಿತ್ರ ಬಿಡುಗಡೆ ದಿನಾಂಕ ನಿಗದಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು