ಮೈಸೂರು, ನ06- ರೈತರು ಭೂಮಿಯನ್ನು ಹಣದಾಸೆಗಾಗಿ ಮಾರಾಟ ಮಾಡಿ ಕೊನೆಗೆ ಯಾವ ರೀತಿ ಪರಿತಪ್ಪಿಸುತ್ತಾನೆ ಎಂಬ ನೈಜ ಕಥೆಯಾಧಾರಿತ ಸಿನಿಮಾ ಕಿಲಾಡಿ ಚಿತ್ರವಾಗಿದ್ದು, ಶೀಘ್ರವೇ ಚಿತ್ರ ತೆರೆಗೆ ಬರಲಿದೆ ಎಂದು ನಟ, ನಿರ್ಮಾಪಕ ವಿನಯ್ ರತ್ನ ಸಿದ್ಧಿ ತಿಳಿಸಿದರು.
ಇಂದು ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ನಟ, ನಿರ್ಮಾಪಕ ವಿನಯ್ ರತ್ನ ಸಿದ್ಧಿ, ಭೂ ಮಾಫಿಯ ಗಂಭೀರ ಸಮಸ್ಯೆಯಿಂದ ಬಳಲುವ ರೈತರಿಗೆ ವಿಶೇಷ ಸಂದೇಶ ಸಾರುವ, ಗ್ರಾಮೀಣ ನೈಜ ಕಥೆಯಾಧಾರಿತ ಚಿತ್ರ ‘ಕಿಲಾಡಿ’ ಚಿತ್ರವಾಗಿದ್ದು, ಶೀಘ್ರವೇ ತೆರೆಗೆ ಬರಲು ಸಿದ್ದವಾಗುತ್ತಿದೆ. 4 ಹಾಡುಗಳು ಸೇರಿದಂತೆ ಹಾಸ್ಯ, ನವಿರಾದ ಪ್ರೇಮ ಚಿತ್ರಕಥೆ ಒಳಗೊಂಡಿದೆ ಎಂದು ತಿಳಿಸಿದರು.
ಕಿಲಾಡಿ ಚಿತ್ರದ ನಾಯಕಿಯಾಗಿ ಚಂದನ, ನಟಿಸಿದ್ದು, ತಾರಾ ಬಳಗದಲ್ಲಿ ಅವಿನಾಶ್, ಬಸವರಾಜು, ಸುಬ್ಬೇಗೌಡ್ರು, ಶ್ರೀಹರ್ಷ, ಧನಂಜಯ್ ಮೊದಲಾದವರು ಅಭಿನಯಿಸಿದ್ದಾರೆ. ರವಿದೇವು ಸಂಗೀತ ನೀಡಿದ್ದು, ಚಿತ್ರವನ್ನು ಕೆ.ಆರ್.ಪೇಟೆ, ಮೈಸೂರು, ಚಿಕ್ಕಮಗಳೂರು, ಮಡಿಕೇರಿ ಮುಂತಾದ ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗುತ್ತಿದ್ದು, ಚಿತ್ರಕ್ಕೆ ಇನೊಬ್ಬ ನಾಯಕಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಹೇಳಿದರು.