News Kannada
Tuesday, December 06 2022

ಮನರಂಜನೆ

ಕ್ಯಾಟ್ ವಾಕ್ ಮಾಡಿ ಮನಗೆದ್ದ ಸುಮುಖ್, ಭಾವ್ ಪ್ರೀತ್

Photo Credit :

ಕ್ಯಾಟ್ ವಾಕ್ ಮಾಡಿ ಮನಗೆದ್ದ ಸುಮುಖ್, ಭಾವ್ ಪ್ರೀತ್

ಮೈಸೂರು: ಮೈಸೂರಿನ ಮಹತ್ವಾಕಾಂಕ್ಷಿ ಹಾಗೂ ಉದಯೋನ್ಮುಖ ಮಾಡೆಲ್ ಗಳಿಗಾಗಿ ಒಂದು ವಾರದ ಕಾಲ ನಡೆದ ಅನ್ವೇಷಣೆಯಲ್ಲಿ ಅಂತಿಮ ಸ್ಪರ್ಧೆಗಳಾಗಿ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ ಪುರುಷರಲ್ಲಿ ಸುಮುಖ್, ಮಹಿಳೆಯರಲ್ಲಿ ಭಾವ್ ಪ್ರೀತ್ ಗೆಲುವಿನ ನಗೆ ಬೀರಿದ್ದಾರೆ.

ಜಿ.ಬಿ. ಮಾಡೆಲ್ ಹಂಟ್ ಸೀಸನ್ 6ರ ಫಿನಾಲೆ ನಗರದ ವಿಂಡ್ಫ್ಲವರ್ ರೆಸಾರ್ಟ್ ನಲ್ಲಿ ನಡೆಯಿತು. ಮೈಸೂರಿನ ಹೆಸರಾಂತ ಡಿಸೈನರ್ ಹಾಗೂ ಫ್ಯಾಷನ್ ವೀಕ್ ನ ಸಂಸ್ಥಾಪಕಿ ಜಯಂತಿ ಬಲ್ಲಾಳ್, ಉದಯೋನ್ಮುಖ ಡಿಸೈನರ್ ಹಾಗೂ ಇಷ್ ಡಿಸೈನರ್ ಲೇಬಲ್ ಸಂಸ್ಥಾಪಕಿ ಅರ್ಪಿತ ರಾಜ್ ರಂದೀಪ್ ಅವರ ಸಂಯುಕ್ತಾಶ್ರಯದಲ್ಲಿ ನಡೆದ ಫ್ಯಾಷನ್ ಶೋನಲ್ಲಿ 200ಕ್ಕೂ ಹೆಚ್ಚು ಫ್ಯಾಷನ್ ಪ್ರಿಯರು ಪಾಲ್ಗೊಂಡಿದ್ದರು.

ಅರ್ಪಿತ ರಾಜ್ ರಂದೀಪ್ ಅವರು ವಿನ್ಯಾಸಗೊಳಿಸಿದ ಮಕ್ಕಳ ಡಿಸೈನರ್ ಉಡುಪುಗಳನ್ನು 6-15 ವರ್ಷದ ಪುಟಾಣಿಗಳು ರ‍್ಯಾಂಪ್ ವಾಕ್ ಮಾಡುವ ಮೂಲಕ ಪ್ರದರ್ಶಿಸಿದರು. ಚಿಣ್ಣರ ಈ ರ‍್ಯಾಂಪ್ ವಾಕ್ ಹಾಗೂ ಅರ್ಪಿತ ರಾಜ್ ರಂದೀಪ್ ಅವರ ಮಕ್ಕಳ ಉಡುಪಿನ ವಿನ್ಯಾಸವು ಪ್ರೇಕ್ಷಕರನ್ನು ಸೆಳೆದು ಮೆಚ್ಚುಗೆಗೆ ಪಾತ್ರವಾಯಿತು. ಇಷ್ ಸಂಸ್ಥೆ ವಿನ್ಯಾಸದ  ಡಿಸೈನರ್ ಉಡುಪನ್ನು ಧರಿಸಿದ್ದ  ಬಾಲಿವುಡ್ ನ ಹೆಸರಾಂತ ನಟಿ ಟಿಸ್ಕ ಚೋಪ್ರ ಅವರು  ಅರ್ಪಿತ ರಾಜ್ ರಂದೀಪ್ ಅವರಿಗಾಗಿ ರ‍್ಯಾಂಪ್ ಮೇಲೆ ಹೆಜ್ಜೆ ಹಾಕುವ ಮೂಲಕ ಇಷ್ ಡಿಸೈನರ್ ಲೇಬಲ್ ಗೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.

See also  ಮೃತ ನಟನ ಸಹೋದರನಿಂದ ನಟಿ ಮೇಲೆ ಕೊಲೆ ಬೆದರಿಕೆ: ಮನೆ ಮೇಲೆ ದಾಂಧಲೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು