News Kannada
Monday, November 28 2022

ಮನರಂಜನೆ

ಬಿಡುಗಡೆಗೆ ಸಿದ್ಧಗೊಂಡಿದೆ ವಿರುಪಾ ಚಿತ್ರ - 1 min read

Photo Credit :

ಬಿಡುಗಡೆಗೆ ಸಿದ್ಧಗೊಂಡಿದೆ ವಿರುಪಾ ಚಿತ್ರ

ಮಂಗಳೂರು: ಉದ್ಯಮಿ ಡ್ಯಾಪ್ನಿ ನೀತು ಡಿಸೋಜ ನಿರ್ಮಾಣದ ಪುನೀಕ್ ಶೆಟ್ಟಿ ನಿರ್ದೇಶನದ `ವಿರುಪಾ’ ಕನ್ನಡ ಚಿತ್ರ ಈಗಾಗಲೇ ಶೂಟಿಂಗ್ ಬಹುತೇಕ ಪೂರ್ಣಗೊಳಿಸಿ, ಸಂಕಲನ ಹಂತದಲ್ಲಿದೆ. ಶೀಘ್ರದಲ್ಲಿ ಈ ಸಿನೆಮಾ ರಿಲೀಸ್ ಆಗಲಿದೆ ಎಂದು ಚಿತ್ರ ನಿರ್ಮಾಣ ತಂಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ.

ಮಕ್ಕಳನ್ನೇ ಮುಖ್ಯ ಕಥೆಯನ್ನಿಟ್ಟು ಮಕ್ಕಳ ಮೂಲಕವೇ ನಡೆಸಿದ ಅಪರೂಪದ ಚಿತ್ರವಿದು. ಪ್ರವಾಸೋದ್ಯಮದಲ್ಲಿ ಜಗತ್ತಿನಲ್ಲಿ ಗುರುತಿಸಿಕೊಂಡ ಹಂಪಿಯಲ್ಲಿ ವಿರುಪಾ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ನಟನಾ ಕೌಶಲ್ಯತೆ ಅರಿಯದ ಮಕ್ಕಳಿಗೆ ಮೊದಲು ನಟನಾ ಚಾತುರ್ಯತೆಯನ್ನು ತಿಳಿಸಿಕೊಟ್ಟು ಆ ಬಳಿಕ ಶೂಟಿಂಗ್ ನಡೆಸಲಾಗಿದೆ. ಈ ಚಿತ್ರದಲ್ಲಿ ಬರುವ ಪಾತ್ರಧಾರಿಗಳು ಸ್ಥಳೀಯರು ಹಾಗೂ ಕಥೆಯಲ್ಲಿ ಬರುವ ಸನ್ನಿವೇಶವನ್ನು ಸ್ವತಃ ಅನುಭವಿಸಿದವರೇ ಆಗಿದ್ದಾರೆ ಎಂದು ಚಿತ್ರತಂಡ ವಿವರ ನೀಡಿದೆ.

ಹಂಪಿಯ ಅಲ್ಲಿನ ಗೈಡ್, ಅಜ್ಜಿಯ ಪಾತ್ರ, ಹೊಟೇಲ್ ನಲ್ಲಿ ಇರುವ ವಿದೇಶಿಗ ಸೇರಿದಂತೆ ಯಾರೆಲ್ಲಾ ಅಲ್ಲಿ ಜೀವನ ನಿರ್ವಹಿಸುತ್ತಿದ್ದಾರೋ ಅವರನ್ನೇ ಮುಖ್ಯ ಭೂಮಿಕೆಯಲ್ಲಿಟ್ಟು ಸಿನೆಮಾ ಮಾಡಲಾಗಿದೆ. ಹಂಪಿಯ ಸುಂದರ ಹಾಗೂ ಮನಮೋಹಕ ದೇಶ್ಯವನ್ನು ಈ ಸಿನೆಮಾದಲ್ಲಿ ಅದ್ಭುತವಾಗಿ ಕಟ್ಟಿಕೊಡಲಾಗಿದೆ ಎಂದು ತಿಳಿಸಿದೆ.

ವಿಶೇಷವಾಗಿ ಈ ಸಿನೆಮಾವನ್ನು ಸಿಂಕ್ ಸೌಂಡ್ ಮಾದರಿಯಲ್ಲಿ ಚಿತ್ರೀಕರಿಸಲಾಗಿದೆ. ಹೀಗಾಗಿ ಶೂಟಿಂಗ್ ಮಾಡುವ ಅಲ್ಲಿನ ಧ್ವನಿಯನ್ನೇ ಈ ಸಿನಿಮಾದಲ್ಲಿ ಹಿಡಿದಿಡಲಾಗಿದೆ. ಈಗಾಗಲೇ ಒಂದು ತಿಂಗಳ ಕಾಲ ಹಂಪಿ ಆಸುಪಾಸಿನಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಮುಂದಿನ ಒಂದು ತಿಂಗಳ ಒಳಗೆ ಫ್ರಾನ್ಸ್ ಗೆ ತೆರಳಿ ಕೊನೆಯ ಹಂತದ ಶೂಟಿಂಗ್ ನಡೆಸಲು ತೀರ್ಮಾನಿಸಲಾಗಿದೆ. ಡಿಕ್ಸನ್ ಜಾಕಿ ಡಿಸೋಜ ಅವರು ಕಾರ್ಯಕಾಲ ನಿರ್ಮಾಪಕರಾಗಿದ್ದಾರೆ.

ಅನಂತ್ ರಾಜ್ ಅರಸ್ ಚಿತ್ರದ ಛಾಯಾಗ್ರಹಣ, ಮಹಾವೀರ್ ಸಬಣ್ಣವರ್ ಶಬ್ಧ ಹಾಗೂ ಅವಿನಾಶ್ ಕಾವೂರು ಸಂಕಲನದಲ್ಲಿ ಕೈಜೋಡಿಸಿದ್ದಾರೆ.

See also  ಒಂದೇ ರಾತ್ರಿಯಲ್ಲಿ ನೋಡುಗರ ಮನ ಗೆದ್ದ ಸಿರೀಸ್ ಫ್ಯಾಮಿಲಿ ಮ್ಯಾನ್ -2 ವೆಬ್ ಸಿರೀಸ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು