News Kannada
Thursday, September 29 2022

ಮನರಂಜನೆ

ಕಾರವಾರದಲ್ಲಿ `ಇನ್‌ಸ್ಪೆಕ್ಟರ್ ವಿಕ್ರಂ’ ಚಿತ್ರೀಕರಣ - 1 min read

Photo Credit :

ಕಾರವಾರದಲ್ಲಿ `ಇನ್‌ಸ್ಪೆಕ್ಟರ್ ವಿಕ್ರಂ' ಚಿತ್ರೀಕರಣ

ಕಾರವಾರ: ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ 30ನೇ ಸಿನಿಮಾ ಇನ್‌ಸ್ಪೆಕ್ಟರ್ ವಿಕ್ರಂನ ಚಿತ್ರೀಕರಣವು ಗುರುವಾರ ಉತ್ತರ ಕನ್ನಡದ ಕಾರವಾರ ತಾಲೂಕಿನ ಬೈತಖೋಲ್‌ನಲ್ಲಿ ನಡೆಯಿತು.

ಪುಷ್ಪಕ ವಿಮಾನದ ನಿರ್ಮಾಪಕ ವಿಖ್ಯಾತ್ ಅವರ ವಿಖ್ಯಾತ್ ಪ್ರೊಡಕ್ಷನ್ ಹೌಸ್‌ನ ಎರಡನೇ ಸಿನಿಮಾ ಇದಾಗಿದೆ. ಶ್ರೀನರಸಿಂಹ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚೊಚ್ಚಲ ಸಿನಿಮಾದಲ್ಲಿ ಪ್ರಜ್ವಲ್ ಅವರು ಪೊಲೀಸ್ ಪಾತ್ರ ದೈನಾಮಿಕ್ ಹೀರೊ ಆಗಿ ನಿರ್ವಹಿಸುತ್ತಿದ್ದಾರೆ.

ಜತೆಗೆ ಈ ಚಿತ್ರದಲ್ಲಿ ಭಾವನಾ ಮೆನನ್ ಅವರು ಪ್ರಜ್ವಲ್‌ಗೆ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ವಿವಾಹದ ಬಳಿಕ ಅವರ ನಟಿಸುತ್ತಿರುವ ಮೊದಲ ಚಿತ್ರ ಇದಾಗಿದ್ದು, ಡ್ರಗ್ ಡೀಲರ್ ಪಾತ್ರದಲ್ಲಿ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚರಣರಾಜ್ ಅವರು ಚಿತ್ರಕ್ಕೆ ಸಂಗೀತ ನೀಡಿದ್ದು, ನವೀನಕುಮಾರ್ ಛಾಯಾಗ್ರಹಣ ಮಾಡುತ್ತಿದ್ದಾರೆ.

ಈ ಚಿತ್ರದಲ್ಲಿ ನಿರ್ದೇಶಕರು ಈಗಿನ ಟ್ರೆಂಡ್‌ಗೆ ತಕ್ಕ ಕಥೆಯನ್ನು ಚಿತ್ರವನ್ನು ರೂಪಿಸುತ್ತಿದ್ದು, ಹಾಸ್ಯ ಹಾಗೂ ಸಾಹಸಮಯ ಚಿತ್ರ ಇದಾಗಿದ್ದು, ಎಲ್ಲ ಸಮುದಾಯವರೂ ನೋಡಬಹುದಾದ ಚಿತ್ರ ನೀಡಲು ತಂಡ ಶ್ರಮಿಸುತ್ತಿದೆ. ಜಿಲ್ಲೆಯ ಗೋಕರ್ಣದಲ್ಲಿ ಈಗಾಗಲೇ ಒಂದು ವಾರದವರೆಗೆ ಚಿತ್ರೀಕರಣ ನಡೆಸಲಾಗಿದೆ. ಈ ಸಂದರ್ಭದಲ್ಲಿ ಸ್ಥಳೀಯರು ಸಿನೆಮಾ ಚಿತ್ರಿಕರಣ ವಿಕ್ಷಣೆಗೆ ಕಿಕ್ಕಿರಿದು ಸೇರಿದ್ದರು.

See also  ಸ್ಯಾಂಡಲ್ ವುಡ್ ಖ್ಯಾತ ಹಾಸ್ಯನಟ ಅಶೋಕ್ ಬಾದರದಿನ್ನಿ ಇನ್ನಿಲ್ಲ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು