News Kannada
Friday, September 30 2022

ಮನರಂಜನೆ

ಅವಳನ್ನು ಮುಟ್ಟಿ ಈ ಪರಿಣಾಮವಾಯಿತು ಇದು “ಗಿಣಿ ಹೇಳಿದ ಕಥೆ”   - 1 min read

Photo Credit :

ಅವಳನ್ನು ಮುಟ್ಟಿ ಈ ಪರಿಣಾಮವಾಯಿತು ಇದು

“ಗಿಣಿ ಹೇಳಿದ ಕಥೆ” ಶೀರ್ಷಿಕೆಯಡಿಯಲ್ಲಿ ಬಹುಮುಖ ಪ್ರತಿಭೆಯುಳ್ಳ ಚಿತ್ರತಂಡದಿಂದ ಚಿತ್ರವೊಂದು ಸಿದ್ಧವಾಗಿದೆ. ಹೊಸಬರೆ ನಿರ್ಮಾಣ ಮಾಡಿರೊ ಈ ಚಿತ್ರ ಇದೆ ಜನವರಿ ಹನ್ನೊಂದಕ್ಕೆ ತೆರೆ ಮೇಲೆ ಬರಲಿದೆ.

ಚಿತ್ರದ ಬಹುತೇಕ ತಾರಬಳಗ ರಂಗಭೂಮಿಯಲ್ಲಿ ಪಳಗಿದವರು. ಮೊದಲ ಬಾರಿಗೆ ಚಿತ್ರರಂಗದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಲು ಮುಂದಾಗಿದ್ದಾರೆ. ಈಗಾಗಲೇ ಸಾಮಾಜಿಕ ತಾಣದಲ್ಲಿ ಸದ್ದು ಮಾಡಿದ್ದು. ಧ್ರುವ ಸರ್ಜಾರಿಂದ ಬಹಳಷ್ಟು ಮೆಚ್ಚುಗೆ ಮಾತನ್ನು ಪಡೆದುಕೊಂಡಿದ್ದಾರೆ.

ಚಿತ್ರದಲ್ಲಿ ನಾಯಕ ನಾಯಕಿಯನ್ನು ಮುಟ್ಟದೆ ಪ್ರೀತಿಸುತ್ತಾನೆ ಆದರೆ ಒಂದು ದಿನ ನಾಯಕಿಯನ್ನು ಮುಟ್ಟಿ ಬಹಳಷ್ಟು ಪರಿಣಾಮ ಎದುರಿಸಬೇಕಾಗುತ್ತದೆ.ಈ ಹೀರೋಗಿರಿಯ ವಿಚಾರದಲ್ಲಿ ಯಾರೂ ಬ್ರೇಕ್ ಮಾಡಲು ಇಚ್ಚಿಸದ ಪರಂಪರಾಗತ ಸಿದ್ಧ ಸೂತ್ರವೊಂದಿದೆ. ಪ್ರತಿಯೊಂದರಲ್ಲಿಯೂ ಬಿಲ್ಡಪ್ಪು, ಎಂಟ್ರಿ ಸಾಂಗಿನ ಅದ್ಧೂರಿತನಗಳಿಲ್ಲದ ಹೀರೋ ಪಾತ್ರವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಆದ್ರೆ ಗಿಣಿ ಹೇಳಿದ ಕಥೆಯ ಹೀರೋ ಇಂಥಾ ಮಾಮೂಲು ಸೂತ್ರಗಳಿಗೆ ತದ್ವಿರುದ್ಧ! ಗಿಣಿ ಹೇಳಿದ ಕಥೆಯ ಹಿಂದಿದೆ ಪ್ರತಿಭಾವಂತರ ತಂಡ.

ದೇವ್ ರಂಗಭೂಮಿ ಅವರ ಹಲವಾರು ವರ್ಷಗಳ ಕನಸು ಗಿಣಿ ಹೇಳಿದ ಕಥೆ. ಬರೊಬ್ಬರಿ ನಾಲ್ಕು ವರ್ಷ ತೆಗೆದುಕೊಂಡಿದ್ದಾರೆ ಈ ಚಿತ್ರಕಥೆ ಬರೆಯಲು. ಕಲಾವಿದರು ಮಾತ್ರವಲ್ಲದೇ ತಂತ್ರಜ್ಞರನ್ನೂ ಕೂಡಾ ಎಚ್ಚರಿಕೆಯಿಂದಲೇ ಆಯ್ಕೆ ಮಾಡಿಕೊಂಡಿದ್ದಾರೆ.

ಕನ್ನಡದಲ್ಲಿ ಹೊಸ ಅಲೆಯ ಚಿತ್ರಗಳ ಜಮಾನ. ಈ ಅಲೆಯಲ್ಲಿಯೇ ಅದೆಷ್ಟೋ ಸಿನಿಮಾಗಳು ಗೆಲುವಿನ ದಡ ಸೇರಿಕೊಂಡಿವೆ. ದೇವ್ ರಂಗಭೂಮಿ ಈ ಚಿತ್ರದ ನಿಜವಾದ ಸೂತ್ರಧಾರ. ನಾಯಕನಾಗಿ ನಿರ್ಮಾಪಕನಾಗಿ ಇದು ಅವರ ಪಾಲಿಗೆ ಹೊಸ ಅನುಭವ. ಚಿತ್ರದ ಧ್ವನಿಸುರುಳಿ ಈಗಾಗಲೆ ಬಿಡುಗಡೆಗೊಂಡಿದ್ದು ಎಲ್ಲ ಹಾಡುಗಳು ಹಿಟ್ ಆಗಿವೆ. ಹಿತನ್ ಹಾಸನ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು ಇದು ಅವರ ಪಾಲಿನ ಮೂರನೇ ಚಿತ್ರವಾಗಿದೆ. ಚಿತ್ರಕಥೆ, ಸಂಭಾಷಣೆ ಹಾಗು ನಾಯಕನಾಗಿ ದೇವ್ ರಂಗಭೂಮಿ ನಿರ್ವಹಿಸಿದರೆ. ನಾಯಕಿಯಾಗಿ ಗೀತಾಂಜಲಿ ನಟನೆ ಮಾಡಿದ್ದಾರೆ.

ನಾಗರಾಜ್ ಉಪ್ಪುಂದ ನಿರ್ದೇಶನದ ಈ ಚಿತ್ರದ ಟೀಸರ್ ಅನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬಿಡುಗಡೆಗೊಳಿಸಿದ್ದಾರೆ. ಈ ಮೂಲಕ ಹೊಸ ತಂಡದ ಹೊಸ ಕನಸಿಗೆ ಸಾಥ್ ನೀಡಿದ್ದಾರೆ. ಬುದ್ಧ ಚಿತ್ರಾಲಯ ಲಾಂಛನದಲ್ಲಿ ಈ ಚಿತ್ರ ಮೂಡಿಬಂದಿದ್ದು ಇದೆ 11ರಂದು ನಿಮ್ಮ ನೆಚ್ಚಿನ ಚಿತ್ರಮಂದಿರದಲ್ಲಿ ತೆರೆ ಕಾಣಲಿದೆ.

 

See also  ಧಾರವಾಹಿ ಶೂಟಿಂಗ್ ಗೆ ಅವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು