ಕಳೆದ ಗುರುವಾರ ಪುಲ್ವಾಮದಲ್ಲಿ ನಡೆದ ಘಟನೆಯಲ್ಲಿ ಮೃತಪಟ್ಟ ವೀರಯೋಧ ಗುರು ಅವರ ಕುಟುಂಬದವರನ್ನು ಮಂಗಳವಾರ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರತಂಡ ಭೇಟಿ ಮಾಡಿ ಸಾಂತ್ವನ ಹೇಳಿದರು. ಇದೇ ವೇಳೆ ಭಾನುವಾರದ ಚಿತ್ರಮಂದಿರದ ಕಲೆಕ್ಷನ್ ಮೊತ್ತವನ್ನು ಗುರು ಅವರ ಕುಟುಂಬಕ್ಕೆ ಚೆಕ್ ಮೂಲಕ ನೀಡಲಾಯಿತು. ತಬಲನಾಣಿ, ಅಪೂರ್ವಶ್ರೀ, ಸಂಜನಾ ಆನಂದ್, ನಿರ್ದೇಶಕ ಕುಮಾರ್, ನಿರ್ಮಾಪಕರಾದ ಡಾ.ಡಿ.ಎಸ್.ಮಂಜುನಾಥ್ ಹಾಗೂ ಕಾರ್ಯಕಾರಿ ನಿರ್ಮಾಪಕ ಶ್ರೀನಿವಾಸ್ ಉಪಸ್ಥಿತರಿದ್ದರು.
ಕಿರಿಕ್ ಹುಡುಗ ಚಂದನ್ ಆಚಾರ್ ಅಭಿನಯದ ಹೊಸ ಚಿತ್ರ ಇದು, ಹದಿನೈದರಂದು ತೆರೆಗೆ ಬಂದಿದೆ. ಜೀವನದಲ್ಲಿ ಆಗುವ ಗಂಭೀರ ವಿಚಾರವನ್ನು ಹಾಸ್ಯದ ಹೊದಿಕೆ ಹಾಕಿ ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ. ನಿರ್ದೇಶಕ ಕುಮಾರ್. ವರ್ಷಾರಂಭದಲ್ಲಿಯೇ ಹೊಸ ಅಲೆಯ ಚಿತ್ರ ಕೆಮಿಸ್ಟ್ರಿ ಆಫ್ ಕರಿಯಪ್ಪ ಸುದ್ದಿ ಕೇಂದ್ರದಲ್ಲಿದೆ. ಪೋಸ್ಟರ್ ಗಳ ಮೂಲಕವೇ ಸೆಳೆದುಕೊಂಡಿದ್ದ ಈ ಸಿನಿಮಾ ಇದೀಗ ನಿಗಿ ನಿಗಿಸೋ ನಿರೀಕ್ಷೆಗಳ ಒಡ್ಡೋಲಗದಲ್ಲಿ.
ಒಂದು ಭಿನ್ನ ಬಗೆಯ ಚಿತ್ರ ನಿರ್ದೇಶನದ ತುಡಿತ ಹೊಂದಿದ್ದ ಕುಮಾರ್ ಅದಕ್ಕೆ ಮಾಂತ್ರಿಕ ಸ್ಪರ್ಶ ನೀಡಿದ್ದಾರೆ. ವಿಭಿನ್ನವಾಗಿಯೇ ದೃಶ್ಯ ಕಟ್ಟಿದ್ದಾರೆ. ಎಲ್ಲಿಯೂ ಕೃತಕ ಅನ್ನಿಸದಂತೆ ಅತ್ಯಂತ ಸಹಜವಾಗಿಯೇ ಈ ಚಿತ್ರವನ್ನವರು ರೂಪಿಸಿದ್ದಾರಂತೆ. ಒಟ್ಟಾರೆಯಾಗಿ ಈ ನೈಜತೆಗೆ ಹತ್ತಿರವಾಗಿರೋ ನಿರೂಪಣೆಯೇ ಇಡೀ ಚಿತ್ರದ ಬಲವೂ ಹೌದೆಂಬುದು ನಿರ್ದೇಶಕರ ಅಭಿಪ್ರಾಯ.