ನವದೆಹಲಿ: ಕೆಲವು ಬಾಲಿವುಡ್ ನಟನಟಿಯರು ಪಕ್ಷಗಳಿಂದ ಭಾರೀ ಪ್ರಮಾಣದಲ್ಲಿ ಹಣ ಪಡೆದು ಟ್ವೀಟ್ ಮಾಡುತ್ತಿದ್ದಾರೆ ಎಂದು ಕುಟುಕು ಕಾರ್ಯಾಚರಣೆಯಿಂದ ತಿಳಿದುಬಂದಿದೆ.
ಬಾಲಿವುಡ್ ನ 30ಕ್ಕೂ ಹೆಚ್ಚು ನಟನಟಿಯರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಕೋಬ್ರಾ ಪೋಸ್ಟ್ ನಡೆಸಿರುವಂತಹ ವಿಡಿಯೋ ಕುಟುಕು ಕಾರ್ಯಾಚರಣೆಯಿಂದ ಪತ್ತೆಯಾಗಿದೆ.
ತೆರಿಗೆಗೆ ಸಿಗದಂತೆ ನಗದು ರೂಪದಲ್ಲಿ ಹಣ ಪಾವತಿ ಮಾಡಬೇಕು ಎಂದು ಈ ನಟನಟಿಯರು ಹೇಳಿಕೊಂಡಿದ್ದಾರೆ.
ಇವುಗಳಲ್ಲಿ ಪ್ರಮುಖರೆಂದರೆ ವಿವೇಕ್ ಒಬೆರಾಯ್, ಶಕ್ತಿ ಕಪೂರ್, ಜಾಕಿ ಶ್ರಾಫ್, ಅಮಿಷಾ ಪಟೇಲ್, ಮಹಿಮಾ ಚೌಧರಿ ಮತ್ತು ಸೋನು ಸೂಡ್ ಒಳಗೊಂಡಿದ್ದಾರೆ. ಗಾಯಕರಲ್ಲಿ ಕೈಲಾಶ್ ಖೇರ್, ಅಭಿಜಿತ್ ಮತ್ತು ಮಿಕಾ ಹೆಸರು ಕೂಡ ಕೇಳಿಬಂದಿದೆ.
ನಟನಟಿಯರು ಮಾತ್ರವಲ್ಲದೆ ಇತರ ಕೆಲವು ಡ್ಯಾನ್ಸರ್ ಗಳು, ರೂಪದರ್ಶಿಗಳು ಕೂಡ ಇದರಲ್ಲಿ ಒಳಗೊಂಡಿದ್ದಾರೆ ಎಂದು ಕೋಬ್ರಾ ಪೋಸ್ಟ್ ನ ವಿಡಿಯೋ ದಾಖಲೆಯು ಹೇಳಿದೆ.