ಬೆಂಗಳೂರು: ನಟ ರೆಬೆಲ್ ಸ್ಟಾರ್ ಅಂಬರೀಷ್ ಅವರ ಮೊದಲ ವರ್ಷದ ಪುಣ್ಯತಿಥಿ ಇಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು.
ಅಂಬರೀಷ್ ಪತ್ನಿ ಸುಮಲತಾ, ಪುತ್ರ ಅಭಿಷೇಕ್, ನಟ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಪೂಜೆ ಸಲ್ಲಿಸಿದರು.
ಪುಣ್ಯತಿಥಿಯಲ್ಲಿ ಅಂಬರೀಷ್ ಗೆ ಇಷ್ಟವಾಗಿರುವ ಬಿರಿಯಾನಿ, ತಲೆಕಾಲು ಮಾಂಸ, ಪುಳಿಯೊಗೆರೆ, ಇಡ್ಲಿ, ಬಾದುಷಾ, ಉಪ್ಪಿಟ್ಟು, ಪೊಂಗಲ್, ಕೀರು, ಕಡುಬು ಸೇರಿದಂತೆ ವಿವಿಧ ಬಗೆಯ ಸಿಹಿ ತಿನಿಸುಗಳನ್ನು ಇಡಲಾಗಿತ್ತು. ಈ ವೇಳೆ ಅಂಬಿಯನ್ನು ನೆನೆದು ಸುಮಲತಾ ಕಣ್ಣೀರು ಹಾಕಿದರು.