ಬದಲಾವಣೆ ಜಗದ ನಿಯಮ. ಜನರು ಬದಲಾದಂತೆ ಅವರ ಟ್ರೆಂಡಿ ಲುಕ್ ಕೂಡಾ ದಿನೆ ದಿನೆ ಬದಲಾಗಿತ್ತಿರುತ್ತದೆ. ಸದಾ ಹೊಸತನವನ್ನು ಬಯಸುವ ಯುವಜನಾಂಗ ಫ್ಯಾಷನ್ ಗೆ ತಕ್ಕಂತೆ ಬದಲಾವಣೆಯಾಗುತ್ತಿದ್ದಾರೆ. ಅದರಲ್ಲೂ ಈಗ ಕೆಲ ವಿಷಯಗಳಲ್ಲಿ ಸ್ರೀ-ಪುರುಷ ಎಂಬ ಬೇಧವಿಲ್ಲದೆ ಅನುಕರಿಸುವುದು ಹಾಸುಹೊಕ್ಕಗಿದೆ.
ಟ್ರೆಂಡಿ ಲುಕ್ಗಳಲ್ಲಿ ಮಾಸ್ಕ್ ಗಳು ಕೂಡಾ ಒಂದು. ಇದು ಆರೋಗ್ಯದ ದೃಷಿಯಿಂದಲೂ ಇರಬಹುದು. ಜಗತ್ತು ಮಲಿನವಾಗಿರುವ ಈ ಕಾಲದಲ್ಲಿ ಟ್ರೆಂಡಿ ಮಾಸ್ಕ್ ಬಳಕೆ ಮಾಡಿಕೊಂಡು ಎದುರಾಗುವ ಧೂಳು, ಹೊಗೆಗಳಿಂದ ರಕ್ಷಣೆಯನ್ನು ಪಡೆಯುವುದು ಒಂದು. ಅದರಲ್ಲೂ ಈ ಕೊರೋನ ಸಮಯದಲ್ಲಿ ಮಾಸ್ಕ್ ಗೆಸಖತ್ ಡಿಮ್ಯಾಂಡ್ ಬಂದಿದೆ. ಭಿನ್ನ ವಿಭಿನ್ನವಾದ ಮಾಸ್ಕ್ ಗಳು ಮಾರುಕಟ್ಟೆಗೆ ಬಂದಿವೆ. ಇನ್ನು ಇದೇ ಮಾಸ್ಕ್ ಗಳನ್ನ ಬೈಕ್ಗಳಲ್ಲಿ ಹೋಗುವಾಗ ಗಾಳಿ ಕಿವಿಗೆ ಸೋಕಬಾರದೆಂದು ಮಾಸ್ಕ್ ಅನ್ನು ಕಿವಿಗೆ ಕೂಡಾ ಧರಿಸುತ್ತಾರೆ. ಹಾಗೆ ಹಣೆಯ ಮೇಲ್ಬಾಗದಲ್ಲಿ ಕೂದಲುಗಳು ನೆಟ್ಟಗೆ ಕೂರಿಸಲು ಕೂಡಾ ಬಳಕೆ ಮಾಡುತ್ತಾರೆ. ಇದು ಕುತ್ತಿಗೆಯನ್ನು ಕೂಡಾ ಬಿಟ್ಟಿಲ್ಲ.
ಇನ್ನು ಇಷ್ಟೆಲ್ಲಾ ಉಪಯೋಗವಿರುವ ಈ ಟ್ರೆಂಡಿ ಮಾಸ್ಕ್ ನಲ್ಲಿ ಚಿತ್ತಾರಗಳು ಮೂಡಿರುವುದು ಕೂಡಾ ವಿಶೇಷ. ಅದರಲ್ಲೂ ಮೂನ್ ಸ್ಟಾರ್, ಚಿಟ್ಟೆ, ದೆವ್ವ ಭೂತಗಳ ಚಿತ್ರಣ, ಕೇವಲ ರಂಗು ರಂಗಿನ ಚಿತ್ರಣ ಇವೇ ತುಂಬಿರುತ್ತವೆ. ಇನ್ನು ಇಂತಹಾ ಮಾಸ್ಕ್ ಗಳು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಲ್ಲೂ ಸಿಗುವುದರಿಂದ ಹೆಚ್ಚು ಕೊಂಡುಕೊಳ್ಳುತ್ತಾರೆ. ಇದು ಇಂದು ಚಿಕ್ಕ ಮಕ್ಕಳಿಂದ ಹಿಡಿದು ಯುವಜನಾಂಗವನ್ನು ತನ್ನೆಡೆ ಸೆಳೆದಿರುವುದು ಸುಳ್ಳಲ್ಲ.
ಇನ್ನು ಇಂದಿನ ಕಾಲದ ಮತ್ತೊಂದು ಟ್ರೆಂಡಿಂಗ್ ಎಂದರೆ ಅದು ಕೈ ಕಡಗ. ಇಂದು ಎಲ್ಲರ ಕೈಗಳಲ್ಲೂ ಕೂಡಾ ಇದು ರಾರಾಜಿಸುತ್ತಿವೆ. ಇದರಲ್ಲೂ ವೆರೈಟಿ ಇದ್ದು ತಾಮ್ರ, ಬೆಳ್ಳಿ, ಸ್ಟೀಲ್ ಹೀಗೆ ಭಿನ್ನ ಭಿನ್ನವಾದ ಕಡಗಗಳು ಪ್ರಸಿದ್ದಿಯನ್ನು ಪಡೆದಿದೆ. ವಿಭಿನ್ನ ಲುಕ್ ಕೊಡುವ ಇವು ಅಂದವನ್ನು ಹೆಚ್ಚಿಸುತ್ತದೆ. ಅಲ್ಲದೆ ವೈಜ್ಞಾನಿಕ ಹಿನ್ನೆಲೆಯನ್ನು ಕೂಡಾ ಹೊಂದಿದ್ದು ತಾಮ್ರದ ಕೈ ಕಡಗಗಳನ್ನು ಬಳಸುವುದರಿಂದ ಸಂಧಿವಾತ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.
ಇನ್ನು ಹೇರ್ ಸ್ಟೈಲ್ ವಿಷಯಕ್ಕೆ ಬರುವುದಾದರೆ ವಿನೂತನವನ್ನು ನಾವು ಕಾಣಬಹುದು. ಒಮ್ಮೆ ಮಾಡಿಸಿದ ಸ್ಟೈಲ್ ಮತ್ತೊಮ್ಮೆ ಬೇಜಾರಾಗಿರುತ್ತದೆ ಹಾಗಾಗಿ ಪ್ರತಿ ಸಲವೂ ಕೂಡ ವಿನೂತನವಾಗಿ ಕಾಣಲು ವಿನೂತನವಾಗಿ ಪ್ರಯೋಗವನ್ನು ಹೇರ್ ಸ್ಟೈಲ್ನಲ್ಲಿ ಮಾಡುತ್ತೆವೆ. ಗೂಗ್ಲಿ, ವಿಲ್ಲನ್, ಹೀಗೆ ತಮ್ಮ ನೆಚ್ಚಿನ ಹೀರೊಗಳು ಯಾವ ರೀತಿಯ ಫ್ಯಾóಷನ್ ಮಾಡುತ್ತಾರೊ ಆ ಫ್ಯಾಷನನ್ನು ಮೊದಲು ನಾನು ಮಾಡಬೇಕೆಂದು ಕಾದು ಕುಳಿತಿರುತ್ತಾರೆ. ಈಗಂತೂ ಹುಡುಗರು ಕೂದಲು ಕಟ್ ಮಾಡುವುದನ್ನೆ ಬಿಟ್ಟಿದ್ದಾರೆ ಅದೇ ಇಂದು ಫ್ಯಾಷನ್ ಆಗಿ ಹೊರಹೊಮ್ಮಿದೆ. ಇನ್ನು ಕೂದಲಿಗೆ ಬಣ್ಣ ಹಚ್ಚುವುದರಲ್ಲೂ ಟ್ರೆಂಡ್ ಇದ್ದು ಈಗ ಆ ಬಣ್ಣ ಈ ಬಣ್ಣ ಎಂದೇನಿಲ್ಲ ಕೇಸರಿ, ನೀಲಿ, ಹಸಿರು, ಬಿಳಿ ಹೀಗೆ ಕಲರ್ಫುಲ್ ಬಣ್ಣಗಳು ಯುವಕರ ತಲೆಯನ್ನೆರಿರುತ್ತವೆ. ಜನರೇಷನ್ ಹೇಗಿದೆ ಎಂದರೆ ಅಪ್ಪನಿಗೆ ನೆತ್ತಿಯಮೇಲೆ ಕೂದಲಿರುವುದಿಲ್ಲ ಮಕ್ಕಳಿಗೆ ತಲೆ ಮೇಲುಗಡೆ ಬಿಟ್ಟು ಉಳಿದೆಡೆ ಕೂದಲಿರುವುದಿಲ್ಲ.
ಇನ್ನು ಹುಡುಗಿಯರ ನೆಚ್ಚಿನ ನೈಲ್ ಪಾಲಿಶ್ಗಳಂತೂ ಮತ್ತಷ್ಟು ಟ್ರೆಂಡಿ ಎಂಬೂದನ್ನು ಮರೆಯುವಂತಿಲ್ಲ. ದಿನದಿಂದ ದಿನಕ್ಕೆ ಅಲ್ಲ ಅಲ್ಲಾ ಗಂಟೆಗೊಮ್ಮೆ ಇವುಗಳು ಬದಲಾಗುತ್ತಿರುತ್ತವೆ. ವಿನೂತನ ಡಿಸೈನ್ನಲ್ಲಿ ಯುವತಿಯರ ಕೈ ಬೆರಳುಗಳು ಕಂಗೊಳಿಸುತ್ತವೆ. ಇನ್ನು ಅವರ ಕೈಬೆರಳಿನ ಜೊತೆಗೆ ಕೈ ಬಳೆಗಳು ಕೂಡಾ ವಿನೂತನವೆ. ಇನ್ನು ಕಿವಿಯೊಲೆ ಹಾಗೂ ಸರ ಹಾಕುವ ಟ್ರೆಂಡ್ ಕಡಿಮೆಯಾಗಿದೆ.
ಹುಡುಗರೋ ದಿನಕ್ಕೊಂದು ರೀತಿಯ ಟ್ರೆಂಡ್ನಲ್ಲಿ ಮುಳುಗಿರುತ್ತಾರೆ. ಹೊಸ ಹೊಸ ಶರ್ಟ್, ಡಿಫರೆಂಟ್ ಶೂಗಳು, ಟಿಶರ್ಟ್ ಮೇಲೆ ಮತ್ತೊಂದು ಶರ್ಟ್, ಶರ್ಟ್ ಮ್ಯಾಚಿಂಗ್ಗೆ ತಕ್ಕಂತೆ ಕೈಗೆ ಬಣ್ಣ ಬಣ್ಣದ ಬ್ಯಾಂಡ್ಗಳು, ಬ್ಯಾಗ್ ಹಾಕಿಕೊಳ್ಳುವ ಶೈಲಿ, ನಡೆಯುವ ಶೈಲಿ, ಹೀಗೆ ಎಲ್ಲವೂ ಕೂಡಾ ಬದಲಾಗಿರುತ್ತದೆ.
ಒಟ್ಟಾರೆ ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುವ ಯುವ ಜನತೆ ನಿತ್ಯವೂ ಹೊಸ ಹೊಸ ಪ್ರಯೋಗವನ್ನು ಪ್ರಯೋಗಿಸುತ್ತಿದ್ದಾರೆ. ಆದರೆ ಇದು ಮುಂದುವರೆದು ಅಸಭ್ಯವರ್ತನೆಗೆ ಕಾರಣವಾಗದಿರಲಿ ಅಷ್ಟೆ.
ಪವನ್ಕುಮಾರ್ ಎಂ ರಿಪ್ಪನ್ಪೇಟೆ