ಹೈದ್ರಾಬಾದ್ : ವೆನ್ನೆಲಕಂಟಿ ಎಂದೇ ಖ್ಯಾತಿ ಪಡೆದಿರುವ ತೆಲುಗು ಗೀತರಚನೆಕಾರ , ಸಂಭಾಷಣೆ ಬರಹಗಾರ ವೆನ್ನೆಲಕಂಟಿ ರಾಜೇಶ್ವರ ಪ್ರಸಾದ್ 64ನೆ ವಯಸ್ಸಿನಲ್ಲಿ ಹೃದಯಾಘಾತದಿಂದ ಚೆನ್ನೈನಲ್ಲಿ ನಿಧನರಾದರು .
1957 ರಲ್ಲಿ ನೆಲ್ಲೂರಿನಲ್ಲಿ ಜನಿಸಿದ ಅವರು, 1986 ರಲ್ಲಿ ‘ ಶ್ರೀ ರಾಮ ಚಂದ್ರುಡು ‘ ಚಿತ್ರದ ಗೀತರಚನೆಕಾರರಾಗಿ ಪಾದಾರ್ಪಣೆ ಮಾಡಿದ್ದರು. ನಂತರದ ಮೂರು ದಶಕಗಳವರೆಗೆ ವೃತ್ತಿಜೀವನದಲ್ಲಿ , ವೆನ್ನೆಲಕಂಟಿ ಸುಮಾರು 2000 ಹಾಡುಗಳಿಗೆ ಸಾಹಿತ್ಯ ಬರೆದಿರುವ ಅವರು 300 ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ .