News Kannada
Thursday, September 29 2022

ಮನರಂಜನೆ

ಕಥಾಲೇಖನ ಚಿತ್ರದ ಎರಡನೇ ಹಂತದ ಚಿತ್ರೀಕರಣಕ್ಕೆ ತಯಾರಿ - 1 min read

Photo Credit :

ಕಥಾಲೇಖನ ಚಿತ್ರದ ಎರಡನೇ ಹಂತದ ಚಿತ್ರೀಕರಣಕ್ಕೆ ತಯಾರಿ

ಜಿಕೆ ಎಂಟರ್ಟೈನ್ಮೆಂಟ್ಸ್ ಸಂಸ್ಥೆಯ ಅಡಿಯಲ್ಲಿ ಗೋಪಾಲ್ ಕುಲಕರ್ಣಿ  ಮತ್ತು ರವಿ ಮಹದೇವ ಜಂಟಿ ನಿರ್ಮಾಪಕರಾಗಿ ನಿರ್ಮಾಣ ಮಾಡುತ್ತಿರುವ ಕನ್ನಡ ಮತ್ತು ತೆಲುಗು ಅವತರಣಿಕೆಯಲ್ಲಿ ಎರಡು ವಿಭಿನ್ನ ಆಯಾಮದ ಕಥೆಯಾಗಿ ರೂಪಗೊಳ್ಳುತ್ತಿರುವ “ಕಥಾಲೇಖನ” ಚಿತ್ರದ ಚಿತ್ರೀಕರಣವು ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದ ಇತರ ಪ್ರದೇಶಗಳಲ್ಲಿ ಮೊದಲ ಹಂತದ ಚಿತ್ರೀಕರಣ ಸದ್ದಿಲ್ಲದೆ ಮುಗಿದಿದ್ದು ಎರಡನೇ ಹಂತದ ಚಿತ್ರೀಕರಣಕ್ಕೆ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ ಚಿತ್ರತಂಡ.

ಈ ಚಿತ್ರಕ್ಕೆ ಕಥೆ. ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನದ ಜವಾಬ್ದಾರಿ  ಸತ್ಯರತ್ನಮ್ ಅವರು ನಿಭಾಯಿಸುತ್ತಿದ್ದಾರೆ, ಛಾಯಾಗ್ರಾಹಕರಾಗಿ ಸಾಮ್ ಅವರ ಕೈಚಳಕವಿದೆ. ಸಂಗೀತ ಸಂಯೋಜನೆ ಕರಣಂ ಶ್ರೀ ರಾಘವೇಂದ್ರ ನೀಡುತ್ತಿದ್ದಾರೆ. ನಮ್ಮ ಚಿತ್ರದ ಶೀರ್ಷಿಕೆಯನ್ನು ದಕ್ಷ ಪ್ರಾಮಾಣಿಕ ಅಧಿಕಾರಿಯಾದ ರವಿಚನ್ನಣ್ಣವರ ಸಾರಥ್ಯದಲ್ಲಿ ಬಿಡುಗಡೆಗೊಂಡಿದ್ದು ಖ್ಯಾತ ಗಾಯಕಿ ಅನುರಾಧ ಭಟ್ ಕಂಠಸಿರಿಯಲ್ಲಿ ಎರಡು ಗೀತೆಗಳಿಗೆ ಧ್ವನಿಯನ್ನು ನೀಡಿರುತ್ತಾರೆ.

ಹರ್ಷವರ್ಧನ ಹೆಗಡೆ ನಿಟ್ಟೂರು ಎರಡು ಗೀತೆಗಳಿಗೆ ಸಾಹಿತ್ಯವಿದ್ದು ಮತ್ತೆರಡು ಗೀತೆಗಳಿಗೆ ಸತ್ಯರತ್ನಮ್ ಸಾಹಿತ್ಯವಿರುತ್ತದೆ, ಖ್ಯಾತ ಗಾಯಕರು ಧ್ವನಿ ನೀಡಲಿದ್ದಾರೆ, ತಾರಾಬಳಗದಲ್ಲಿ ಇಂಡಿಯಾ ವರ್ಸಸ್ ಇಂಗ್ಲೆಂಡ್ ಖ್ಯಾತಿಯ ಗೋಪಾಲ್ ಕುಲಕರ್ಣಿ ನನ್ನರಸಿ ರಾದೆ ಖ್ಯಾತಿಯ ಅರ್ಫಾತ್ ನಾಗೇಂದ್ರ ಅರಸ್, ಮಜಾಭಾರತ ಖ್ಯಾತಿಯ ಚಂದ್ರಪ್ರಭ, ಜಗ್ಗಪ್ಪ, ಪಲ್ಟಿ ಗೋವಿಂದ,ಲ್ಯಾಗ್ ಮಂಜು ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತು ಅರುಣ್ ಕುಮಾರ್, ಪ್ರಶಾಂತ್ ಶೆಟ್ಟಿ,ರಾಜೇಶ್ವರಿ ಪಾಂಡೆ ನಟಿಸಿದ್ದಾರೆ. ಎರಡನೇ ಹಂತದ ಚಿತ್ರೀಕರಣದಲ್ಲಿ ಹೆಸರಾಂತ ನಟ ಮತ್ತು ನಟಿಯರು  ತಂಡ  ಸೇರಲಿದ್ದಾರೆ.

See also  6 ಸೈಮಾ ಅವಾರ್ಡ್ಸ್ ಗಳನ್ನು ಪಡೆದ ಕಿರಿಕ್ ಪಾರ್ಟಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು