News Kannada
Saturday, December 03 2022

ಮನರಂಜನೆ

51ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾದ ಸೂಪರ್ ಸ್ಟಾರ್ ರಜನಿಕಾಂತ್; ಮೋದಿಯಿಂದ ಅಭಿನಂದನೆ

Photo Credit :

51ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾದ ಸೂಪರ್ ಸ್ಟಾರ್ ರಜನಿಕಾಂತ್; ಮೋದಿಯಿಂದ ಅಭಿನಂದನೆ

ನವದೆಹಲಿ : ಸಿನಿಮಾ ರಂಗದಲ್ಲಿ ಅತ್ಯಂತ ಗೌರವ ಗೌರವವುಳ್ಳ ಪ್ರಶಸ್ತಿಯಾಗಿರುವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಈ ಬಾರಿ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಒಲಿದು ಬಂದಿದೆ.

51 ನೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ಭಾಜನರಾಗಿದ್ದು, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಈ ಮಾಹಿತಿ ನೀಡಿದ್ದಾರೆ . ಈ ಸಂಬಂಧ ಟ್ವಿಟರ್ನಲ್ಲಿ ಮಾಹಿತಿ ನೀಡಿರುವ ಜಾವಡೇಕರ್ ‘ 2020 ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ರಜನಿಕಾಂತ್ರ ಹೆಸರನ್ನು ಘೋಷಿಸುತ್ತಿರುವುದಕ್ಕೆ ಸಂತಸವಾಗುತ್ತಿದೆ . ನಟ , ನಿರ್ಮಾಪಕ ಹಾಗೂ ನಿರ್ದೇಶಕನಾಗಿ ಸಿನಿರಂಗಕ್ಕೆ ರಜನಿಕಾಂತ್ ನೀಡಿರುವ ಕೊಡುಗೆ ಅಪಾರ ಎಂದು ತಿಳಿಸಿದ್ದಾರೆ.

ಇನ್ನು ಈ ಬಾರಿಯ ಪ್ರಶಸ್ತಿಗೆ, ತೀರ್ಪುಗಾರರಾದ ಗಾಯಕಿ ಆಶಾ ಬೋಸ್ಥೆ , ನಿರ್ಮಾಪಕ ಸುಭಾಷ್ ಘಾಯ್ , ನಟ ಮೋಹನ್ಹಾಲ್ , ಗಾಯಕ ಶಂಕರ್ ಮಹದೇವನ್ ಹಾಗೂ ಹಿರಿಯ ನಟ ಬಿಸ್ವಜೀತ್ ಚಟರ್ಜಿ ಆಯ್ಕೆ ಆಗಿದ್ದರು.

ಈ ವಿಚಾರದ ಬಗ್ಗೆ ಅಭಿನಂದನೆ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಎಲ್ಲ ವಯೋಮಾನದ ಪ್ರೇಕ್ಷಕರ ಮಧ್ಯೆ ಜನಪ್ರಿಯರಾಗಿರುವ ನಟ ರಜನಿಕಾಂತ್ , ಎಲ್ಲ ಪಾತ್ರಗಳನ್ನು ಲೀಲಾಜಾಲವಾಗಿ ಅಭಿನಯಿಸುವ ಕೆಲವು ನಟರಲ್ಲಿ ಒಬ್ಬರಾಗಿದ್ದಾರೆ ಎಂದು ತಿಳಿಸಿದ್ದಾರೆ.

See also  ರಂಗಭೂಮಿಯನ್ನು ತನ್ನ ಹೆಸರಿಗೆ ಕೂಡಿಸಿಕೊಂಡ "ಗಿಣಿ ಹೇಳಿದ ಕಥೆ" ಯ ನಾಯಕ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು