ಮುಂಬೈ: ಬ್ಲಾಕ್‌ಬಸ್ಟರ್ ‘ಪಠಾನ್’ ಯಶಸ್ಸಿನ ನಂತರ ಶಾರುಖ್ ಖಾನ್ ರೋಲ್ಸ್ ರಾಯ್ಸ್ ಕಲಿನನ್ ಬ್ಲಾಕ್ ಬ್ಯಾಡ್ಜ್ ಎಸ್‌ಯುವಿ ಕಾರು ಖರೀದಿಸಿದ್ದಾರೆ. ಇದು ಕಸ್ಟಮೈಸ್ ಆವೃತ್ತಿಯಾಗಿದ್ದು ಕಸ್ಟಮೈಸೇಶನ್‌ಗಳೊಂದಿಗೆ 10 ಕೋಟಿ ರೂ. ಬೆಲೆ ಹೊಂದಿದೆ ಎನ್ನಲಾಗಿದೆ.
ಎಸ್‌ಆರ್‌ಕೆ ಅವರ ಹೊಸ ಕಾರಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಾಲಿವುಡ್‌ನ ಕಿಂಗ್ ಇತ್ತೀಚೆಗೆ ಮುಂಬೈನ ಬೀದಿಗಳಲ್ಲಿ ರಾತ್ರಿಯಲ್ಲಿ ತನ್ನ ಹೊಸ ಕಾರನ್ನು ಓಡಿಸುತ್ತಿರುವುದು ವಿಡಿಯೋದಲ್ಲಿದೆ. ಇದು ಸಿಗ್ನೇಚರ್ ನಂಬರ್ ಪ್ಲೇಟ್ ‘0555’ ನಂಬರ್ ಪ್ಲೇಟ್ ಸಹ ಹೊಂದಿದೆ. ಎಸ್‌ಆರ್‌ಕೆ ಫ್ಯಾಂಟಮ್ ಡ್ರಾಪ್‌ಹೆಡ್ ಕೂಪೆ, ಲ್ಯಾಂಡ್ ರೋವರ್ ರೇಂಜ್ ರೋವರ್ ಸ್ಪೋರ್ಟ್ ಹೊಂದಿದ್ದಾರೆ. ಅಲ್ಲದೇ ಹ್ಯುಂಡೈ ಸ್ಯಾಂಟ್ರೊ ಮತ್ತು ಕ್ರೆಟಾ ಜೊತೆಗೆ ಟೊಯೊಟಾ ಲ್ಯಾಂಡ್ ಕ್ರೂಸರ್, ಮಿತ್ಸುಬಿಷಿ ಪಜೆರೊ ಹೊಂದಿದ್ದಾರೆ.