ಒಂದೇ ಸಿನಿಮಾದಲ್ಲಿ ಪ್ರಿಯಮಣಿ, ಪ್ರಿಯಾಂಕಾ ಉಪೇಂದ್ರ

ಒಂದೇ ಸಿನಿಮಾದಲ್ಲಿ ಪ್ರಿಯಮಣಿ, ಪ್ರಿಯಾಂಕಾ ಉಪೇಂದ್ರ

HSA   ¦    Nov 11, 2020 09:43:48 AM (IST)
ಒಂದೇ ಸಿನಿಮಾದಲ್ಲಿ ಪ್ರಿಯಮಣಿ, ಪ್ರಿಯಾಂಕಾ ಉಪೇಂದ್ರ

ಬೆಂಗಳೂರು: ಕನ್ನಡ ಇಬ್ಬರು ಖ್ಯಾತ ನಟಿಯರಾದ ಪ್ರಿಯಮಣಿ ಮತ್ತು ಪ್ರಿಯಾಂಕಾ ಉಪೇಂದ್ರ ಅವರು ಜತೆಯಾಗಿ ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ.

ಇವರಿಬ್ಬರು ಕೈಮರ ಎನ್ನುವ ಸಿನಿಮಾದಲ್ಲಿ ನಟಿಸಲಿದ್ದು, ಇದರ ಚಿತ್ರೀಕರಣವು ಶೀಘ್ರದಲ್ಲೇ ಆರಂಭವಾಗಲಿದೆ.

ಪಿ. ವಾಸು ಅವರ ಸಂಬಂಧಿ ಇ. ಗೌತಮ್ ಅವರು ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಇದೊಂದು ಸೈಕಾಲಾಜಿ ಥ್ರಿಲ್ಲರ್ ಆಗಿರಲಿದೆ ಎಂದು ಅವರು ಹೇಳಿರುವರು. ಗೌತಮ್ ಅವರೇ ಇದಕ್ಕೆ ಕಥೆ ಹಾಗೂ ಚಿತ್ರಕಥೆ ಬರೆದಿರುವರು. ಗುರುಕಿರಣ್ ಇದಕ್ಕೆ ಸಂಗೀತ ನೀಡಲಿರುವರು.

ಛಾಯಾ ಸಿಂಗ್ ಅವರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿರುವರು. ಆದರೆ ಯಾವ ನಟರು ಇದರಲ್ಲಿ ನಟಿಸುವರು ಎನ್ನುವ ಬಗ್ಗೆ ಇದುವರೆಗೆ ಚಿತ್ರತಂಡವು ಮಾಹಿತಿ ಹೊರಹಾಕಿಲ್ಲ.