ಸಿಹಿಸುದ್ದಿ ಹಂಚಿಕೊಂಡಿರುವ ಖ್ಯಾತ ಗಾಯಕಿ ಶ್ರೇಯಾ ಘೋಷಲ್

ಸಿಹಿಸುದ್ದಿ ಹಂಚಿಕೊಂಡಿರುವ ಖ್ಯಾತ ಗಾಯಕಿ ಶ್ರೇಯಾ ಘೋಷಲ್

MS   ¦    Mar 04, 2021 06:26:47 PM (IST)
ಸಿಹಿಸುದ್ದಿ ಹಂಚಿಕೊಂಡಿರುವ ಖ್ಯಾತ ಗಾಯಕಿ ಶ್ರೇಯಾ ಘೋಷಲ್

ಮುಂಬೈ : ತನ್ನ ಕಂಠಸಿರಿಯ ಮೂಲಕ ಎಲ್ಲರಿಗೂ ಚಿರಪರಿಚಿತವಾಗಿರುವ ಗಾಯಕಿ ಶ್ರೇಯಾ ಘೋಷಲ್ ಹೊಸ ಫೋಟೋ ಒಂದನ್ನು ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಹಂಚಿಕೊಳ್ಳುವ ಮೂಲಕ ಇದೀಗ ವೈರಲ್ ಆಗಿದ್ದಾರೆ.

ಶ್ರೇಯಾ ಮದುವೆಯಾಗಿ ಆರು ವರ್ಷಗಳ ಬಳಿಕ ತಾಯಿಯಾಗುತ್ತಿರುವ ಕುರಿತು ಬರೆದುಕೊಂಡಿದ್ದು, ಬೇಬಿ ಶ್ರೇಯಾದಿತ್ಯ ಶೀಘ್ರವೇ ಬರಲಿದ್ದಾರೆ. ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಬೇಕು. ಶಿಲಾದಿತ್ಯ ಹಾಗೂ ನಾನು ಈ ಸಿಹಿಸುದ್ದಿಯನ್ನು ಹಂಚಿಕೊಳ್ಳಲು ಬಹಳ ಸಂತೋಷವಾಗುತ್ತಿದೆ ಎಂದು ಫೋಟೋದೊಂದಿಗೆ ಬರೆದುಕೊಂಡಿದ್ದಾರೆ .

ಭಾರತದ ಹಲವು ಭಾಷೆಗಳಲ್ಲಿ ಶ್ರೇಯಾ ಘೋಷಾಲ್ ಹಾಡಿದ್ದು , ರಾಷ್ಟ್ರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ . ಅಷ್ಟೇ ಅಲ್ಲದೆ, ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಈ ಗಾಯಕಿ ಹಂಚಿಕೊಂಡಿರುವ ಸಿಹಿಸುದ್ದಿಯನ್ನು ಕೇಳುತ್ತಲೇ ಶ್ರೇಯಾ ಘೋಷಲ್ ಅಭಿಮಾನಿಗಳು, ಹಿತೈಷಿಗಳು ಆನಂದ ವ್ಯಕ್ತಪಡಿಸಿದ್ದಾರೆ.