ನಟಿ ಸಂಜನಾ ಇಸ್ಲಾಂ ಧರ್ಮಕ್ಕೆ ಮತಾಂತರ

ನಟಿ ಸಂಜನಾ ಇಸ್ಲಾಂ ಧರ್ಮಕ್ಕೆ ಮತಾಂತರ

Megha R Sanadi   ¦    Sep 20, 2020 12:04:20 PM (IST)
ನಟಿ ಸಂಜನಾ ಇಸ್ಲಾಂ ಧರ್ಮಕ್ಕೆ ಮತಾಂತರ

ಬೆಂಗಳೂರು:  ನಟಿ ಸಂಜನಾ ಗಲ್ರಾನಿ ಎರಡು ವರ್ಷಗಳ ಹಿಂದೆಯೇ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ಇಸ್ಲಾಂ ಧಾರ್ಮಿಕ ಮುಖಂಡ ಮೊಹಮ್ಮದ್ ಜಲಾಲುದ್ದೀನ್ ಹೇಳಿದ್ದಾರೆ.

ಸಂಜನಾ ಗಲ್ರಾನಿ 2018ರ ಅ.9ರಂದು ಮೊಹಮ್ಮದ್ ಜಲಾಲುದ್ದೀನ್ ಅವರನ್ನು ಭೇಟಿಯಾಗಿ ಮತಾಂತರ ಪ್ರಕ್ರಿಯೆಯನ್ನು ಸಂಪ್ರದಾಯಿಕವಾಗಿ ಪೂರ್ಣಗೊಳಿಸಿದ್ದಾರೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಈ ಸಂಬಂಧ ಪ್ರತಿಕ್ರಿಯಿಸಿದ ಧಾರ್ಮಿಕ ಮುಖಂಡ ಮೊಹಮ್ಮದ್ ಜಲಾಲುದ್ದೀನ್, ‘ಇಮ್ತಿಯಾಜ್ ಮತ್ತು ಅಸ್ಲಂ ಪಾಷಾ ಎಂಬ ಇಬ್ಬರು ಸ್ನೇಹಿತರೊಂದಿಗೆ ಸಂಜನಾಳನನ್ನು ಭೇಟಿಯಾಗಿದ್ದು, ಅಫಿಡವಿಟ್ ಅನ್ನು ಪರಿಶೀಲಿಸಿದ ನಂತರ ಸಂಜಾಳನನ್ನು ಇಸ್ಲಾಂಗೆ ಮತಾಂತರಗೊಳಿಸಲಾಯಿತು. ಈಗ ಅವಳ ಹೆಸರು ಮಹಿರಾ" ಎಂದು ಅವರು ಮಾಹಿತಿ ನೀಡಿದರು.