ನಟ ದೀಪ್ ಸಿಧು ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡೆದ ದೆಹಲಿ ನ್ಯಾಯಾಲಯ

ನಟ ದೀಪ್ ಸಿಧು ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡೆದ ದೆಹಲಿ ನ್ಯಾಯಾಲಯ

MS   ¦    Feb 24, 2021 02:59:51 PM (IST)
ನಟ ದೀಪ್ ಸಿಧು ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡೆದ ದೆಹಲಿ ನ್ಯಾಯಾಲಯ

ನವದೆಹಲಿ: ನಟ-ಕಾರ್ಯಕರ್ತ ದೀಪ್ ಸಿಧು ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳಿಸಲು ದೆಹಲಿ ಕೋರ್ಟ್ ಒಪ್ಪಿಗೆ ನೀಡಿದೆ.

ಕೇಂದ್ರ ಸರ್ಕಾರದ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು ಗಣರಾಜ್ಯೋತ್ಸವದಂದು ನಡೆಸಿದ ಟ್ರ್ಯಾಕ್ಟರ್ ಪೆರೇಡ್ ಸಂದರ್ಭದಲ್ಲಿ ಕೆಂಪು ಕೋಟೆಯ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನಟ ದೀಪ್ ಸಿಂಧು ಅವರನ್ನು ಬಂಧಿಸಲಾಗಿತ್ತು ಹಾಗೂ ಏಳು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಇದೀಗ ಅದರ ಅವಧಿ ಮುಗಿದಿದ್ದು, ಸಿಧು ಅವರನ್ನು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಮರ್ಜೀತ್ ಕೌರ್ ಅವರ ಮುಂದೆ ಹಾಜರುಪಡಿಸಿದರು.

ಕೆಂಪು ಕೋಟೆಯಲ್ಲಿ ನಡೆದ ಹಿಂಸಾತ್ಮಕ ಘಟನೆಗಳ ಮುಖ್ಯ ಪ್ರಚೋದಕರಲ್ಲಿ ಒಬ್ಬರು ಎಂದು ಪೊಲೀಸರು ಆರೋಪಿಸಿದ ನಂತರ, ನ್ಯಾಯಾಲಯವು ಫೆ. 9ರಂದು ಏಳು ದಿನಗಳ ಕಾಲ ಸಿಧುರನ್ನು ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿತ್ತು.ಬಳಿಕ ಫೆಬ್ರವರಿ 16ರಂದು ಅವರ ಬಂಧನವನ್ನು ಏಳು ದಿನಗಳ ವರೆಗೆ ವಿಸ್ತರಿಸಲಾಯಿತು.
ಘಟನೆ ನಡೆದ ಸ್ಥಳದಲ್ಲಿ ಸಿಧು ಹಾಜರಿದ್ದರು ಎಂದು ಹೇಳಬಹುದಾದ ವಿಡಿಯೊಗಳಿವೆ ಎಂದು ಪೊಲೀಸರು ಹೇಳಿದ್ದಾರೆ.

ಗಲಭೆ (147 ಮತ್ತು 148), ಕಾನೂನುಬಾಹಿರ ಸಭೆ (149), ಕೊಲೆ ಯತ್ನ (120-ಬಿ), ಕ್ರಿಮಿನಲ್ ಪಿತೂರಿ (120-ಬಿ), ಸಾರ್ವಜನಿಕ ಸೇವಕನ ಮೇಲೆ ಹಲ್ಲೆ ಅಥವಾ ಅಡ್ಡಿಪಡಿಸುವುದು (152), ಡಕಾಯಿತಿ (395), ಅಪರಾಧಿ ನರಹತ್ಯೆ (308) ಮತ್ತು ಸಾರ್ವಜನಿಕ ಸೇವಕರಿಂದ ಘೋಷಿಸಲ್ಪಟ್ಟ ಆದೇಶಕ್ಕೆ ಅಸಹಕಾರ (188) ಸೇರಿದಂತೆ ಹಲವಾರು ಅಪರಾಧ ಪ್ರಕರಣಗಳ ಅಡಿಯಲ್ಲಿ ಸಿಧು ಅವರನ್ನು ಬಂಧಿಸಲಾಗಿದೆ.