ಅನವಶ್ಯಕ ಸುದ್ದಿಗೆ ಗುರಿಯಾದ ವಿರಾಟ್-ಅನುಷ್ಕಾ ಜೋಡಿ

ಅನವಶ್ಯಕ ಸುದ್ದಿಗೆ ಗುರಿಯಾದ ವಿರಾಟ್-ಅನುಷ್ಕಾ ಜೋಡಿ

MS   ¦    Jan 13, 2021 02:56:42 PM (IST)
ಅನವಶ್ಯಕ ಸುದ್ದಿಗೆ ಗುರಿಯಾದ ವಿರಾಟ್-ಅನುಷ್ಕಾ ಜೋಡಿ

ನವದೆಹಲಿ : ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಎರಡು ದಿನಗಳ ಹಿಂದೆಯಷ್ಟೇ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. ಅದರ ಬೆನ್ನಲ್ಲೇ ದಂಪತಿ ಅನಗತ್ಯವಾಗಿ ವಿವಾದಕ್ಕೆ ಗುರಿಯಾಗಿದ್ದರೆ.

ಹೌದು, ಪತ್ರಿಕಾ ಮುದ್ರಣಾಲಯ ಮಾಡಿದ ಅಜಾಗ್ರತೆಯ ಕಾರಣಕ್ಕಾಗಿ ಈ ಜೋಡಿ ಅನವಶ್ಯಕ ಮಾತುಗಳನ್ನು ಕೇಳಬೇಕಾಗಿದೆ. ಅಷ್ಟಕ್ಕೂ ಪತ್ರಿಕೆ ಮಡಿದ ಎಡವಟ್ಟು ಏನಂದರೆ ತಪ್ಪಾದ ಸುದ್ದಿಗೆ ಅನುಷ್ಕಾ -ವಿರಾಟ್ ಫೋಟೋವನ್ನು ಹಾಕಿ ಪ್ರಕಟಿಸಿರುವುದು.

ಇಂಗ್ಲಿಷ್ ದಿನಪತ್ರಿಕೆಯೊಂದು ತನ್ನ ಮೊದಲ ಪುಟದಲ್ಲಿ, 'ಜಮ್ಮು-ಕಾಶ್ಮೀರದಲ್ಲಿ 2 ಜೆಇಎಂ ಉಗ್ರರು ಬಂಧಿತ' ಎಂಬ ಶೀರ್ಷಿಕೆಯಡಿ ಯಲ್ಲಿ ವಿರಾಟ್ ಹಾಗೂ ಅನುಷ್ಕಾ ಅವರ ಭಾವಚಿತ್ರವನ್ನು ಹಾಕಿರುವುದು ಎಲ್ಲರ ಗಮನ ಬೆಳೆದಿದ್ದು, ಹಲವಾರು ಟ್ರೋಲ್ ಹಾಗೂ ಟೀಕೆಗಳಿಗೆ ಒಳಗಾಗಿದೆ. ಈ ಸುದ್ದಿ ಎಲ್ಲೆಡೆ ಬರಲಾಗಿತ್ತು ಭಾರಿ ವಿವಾದ ಹಾಗೂ ಹಾಸ್ಯಸ್ಪದವಾಗಿ ಬಿಂಬಿತವಾಗಿದೆ.‌