ಶ್ರೀಕಂಠೇಶ್ವರನ ದರ್ಶನ ಪಡೆದ ಯಶ್ ದಂಪತಿ

ಶ್ರೀಕಂಠೇಶ್ವರನ ದರ್ಶನ ಪಡೆದ ಯಶ್ ದಂಪತಿ

HSA   ¦    Mar 12, 2020 10:17:58 AM (IST)
ಶ್ರೀಕಂಠೇಶ್ವರನ ದರ್ಶನ ಪಡೆದ ಯಶ್ ದಂಪತಿ

ನಂಜನಗೂಡು: ಕನ್ನಡ ಚಿತ್ರ ರಂಗದ ಜನಪ್ರಿಯ ನಟ ಕೆಜಿಎಫ್ ನ ರಾಕಿಬಾಯ್ ಖ್ಯಾತ ನಟ ಯಶ್ ಹಾಗೂ ಶ್ರೀಮತಿ ರಾಧಿಕಾ ಪಂಡಿತ್‍ರವರ ಪುತ್ರಿ ಐರಾ ಯಶ್‍ಗೆ ಶ್ರೀಕಂಠೇಶ್ವರ ಹರಕೆ ತೀರಿಸಲು ಬುಧವಾರ ದಕ್ಷಿಣ ಕಾಶಿ ನಂಜನಗೂಡಿಗೆ ಆಗಮಿಸಿ ತನ್ನ ಪುತ್ರಿಯ ಮುಡಿ ನೀಡಿದರು.

ಈ ಬಾರಿ ಅಭಿಮಾನಿಗಳ ಮತ್ತು ಭಕ್ತಾಧಿಗಳ ಜನಸ್ತೋಮ, ಪೊಲೀಸ್ ಭದ್ರತೆಯಲ್ಲಿ ಬೆಳಿಗ್ಗೆ 6.30ರಲ್ಲಿ ದೇಗುಲಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅರ್ಚಕರಾದ ವಿಶ್ವನಾಥ್‍ಜೋಯೀಸ್, ಸಪ್ತಜೋಯಿಸ್, ಶ್ರೀಕಂಠಜೋಯಿಸ್, ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಶಿವಕುಮಾರಯ್ಯ, ಡಿವೈಎಸ್ಪಿ ಪ್ರಭಾಕರ್ ಸಿಂಧೆ ಇದ್ದರು. ಯಶ್‍ರವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದು ಅವರನ್ನು ಚದುರಿಸಲು ಪೊಲೀಸರು ಹರಸಹಾಸ ಪಡಬೇಕಾಯಿತು. ಈ ವೇಳೆ ಯಶ್ ದಂಪತಿ ಅಭಿಮಾನಿಗಳತ್ತ ಕೈಬೀಸುತ್ತಾ ದರ್ಶನ ಮುಗಿಸಿ ತೆರಳಿದರು.