ನಟ ಜಗ್ಗೇಶ್ ಬಳಿ ಕ್ಷಮೆ ಕೇಳಿ ಸಂಘರ್ಷಕ್ಕೆ ತೆರೆ ಎಳೆದ ದರ್ಶನ್

ನಟ ಜಗ್ಗೇಶ್ ಬಳಿ ಕ್ಷಮೆ ಕೇಳಿ ಸಂಘರ್ಷಕ್ಕೆ ತೆರೆ ಎಳೆದ ದರ್ಶನ್

MS   ¦    Feb 24, 2021 07:48:07 PM (IST)
ನಟ ಜಗ್ಗೇಶ್ ಬಳಿ ಕ್ಷಮೆ ಕೇಳಿ ಸಂಘರ್ಷಕ್ಕೆ ತೆರೆ ಎಳೆದ ದರ್ಶನ್

ಬೆಂಗಳೂರು: ದರ್ಶನ್ ಅಭಿಮಾನಿಗಳು ಹಾಗೂ ನವರಸನಾಯಕ ಜಗ್ಗೇಶ್ ಅದರ ನಡುವೆ ಉಂಟಾದ ಸಂಘರ್ಷವನ್ನು ತಣಿಸುವ ಮೂಲಕ, ಕೆಲದಿನಗಳಿಂದ ಸ್ಯಾಂಡಲ್ ವುಡ್ ನಲ್ಲಿ ನಡೆಯುತ್ತಿದ್ದ ಮಾತಿನ ಚಕಮಕಿಗೆ ತೆರೆ ಎಳೆದ ಚಾಲೆಂಜಿಂಗ್ ಸ್ಟಾರ್ ದರ್ಶನ್.

ಅಭಿಮಾನಿಗಳ ನಡವಳಿಕೆಗೆ ನಾನು ಕ್ಷಮೆ ಕೇಳುತ್ತೇನೆ ಎಂದು ನವರಸನಾಯಕ ಜಗ್ಗೇಶ್ ಅವರ ಬಳಿ ಸಾರಿ ಕೇಳುವ ಮೂಲಕ ಈ ಎಲ್ಲಾ ಗಲಾಟೆಗೆ ತೆರೆ ಎಳೆದು ತನ್ನ ಹಿರಿಮೆಯನ್ನು ಮೆರೆದಿದ್ದಾರೆ.

ನಿರ್ಮಾಪಕರ ಜೊತೆಗೆ ಮಾತನಾಡುವ ಸಂದರ್ಭದಲ್ಲಿ ಜಗ್ಗೇಶ್ ಅವರು ದರ್ಶನ್ ಕುರಿತಾಗಿ ಆಡಿದ ಮಾತು ಅಭಿಮಾನಿಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಅದಕ್ಕೆ ಉತ್ತರಿಸಿರುವ ದರ್ಶನ್, ಜಗ್ಗೇಶ್ ಅವರು ಸೀನಿಯರ್. ಅವರೇ ಮುಂದೆ. ನಾವು ಅವರ ಹಿಂದೆ ಇರುತ್ತೇವೆ. ಅವರು ಏನೇ ಮಾತಾಡಿದರೂ ನಮ್ಮ ಬಗ್ಗೆ ತಾನೇ ಮಾತಾಡಿದ್ದಾರೆ ಎಂದು ಹೇಳಿದ್ದಾರೆ.