ನಟಿ ರೇಖಾಗೆ ಕೊರೋನಾ ಪರೀಕ್ಷೆಗೆ ಸಲಹೆ ನೀಡಿದ ಬಿಎಂಸಿ

ನಟಿ ರೇಖಾಗೆ ಕೊರೋನಾ ಪರೀಕ್ಷೆಗೆ ಸಲಹೆ ನೀಡಿದ ಬಿಎಂಸಿ

HSA   ¦    Jul 14, 2020 07:37:07 PM (IST)
ನಟಿ ರೇಖಾಗೆ ಕೊರೋನಾ ಪರೀಕ್ಷೆಗೆ ಸಲಹೆ ನೀಡಿದ ಬಿಎಂಸಿ

ಮುಂಬಯಿ: ಮನೆಯ ಭದ್ರತಾ ಹಾಗೂ ಮನೆ ಕೆಲಸದ ಸಿಬ್ಬಂದಿ ಕೊರೋನಾ ಪಾಸಿಟಿವ್ ಆಗಿರುವ ಬಳಿಕ ಹೋಮ್ ಕ್ವಾರಂಟೈನ್ ನಲ್ಲಿರುವ ಬಾಲಿವುಡ್ ನ ಹಿರಿಯ ನಟಿ ರೇಖಾ ಅವರಿಗೆ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಲು ಬೃಹನ್ ಮುಂಬಯಿ ಮಹಾನಗರ ಪಾಲಿಕೆ(ಬಿಎಂಸಿ) ಸಲಹೆ ನೀಡಿದೆ.

ಮನೆಯ ಭದ್ರತಾ ಮತ್ತು ಮನೆ ಕೆಲಸದ ಸಿಬ್ಬಂದಿ ಕೊರೋನಾ ಪಾಸಿಟಿವ್ ಆದ ಬಳಿಕ ರೇಖಾ ಅವರು ಬಾಂದ್ರಾದಲ್ಲಿರುವ ತನ್ನ ಮನೆಯಲ್ಲಿ ಕ್ವಾರಂಟೈನ್ ಆಗಿರುವರು. ಅವರ ಮನೆಯನ್ನು ಸೀಲ್ ಡೌನ್ ಮಾಡಿ ಸ್ಯಾನಿಟೈಸ್ ಮಾಡಲಾಗಿದೆ.

ರೇಖಾ ಮನೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣವು ವಾರಾಂತ್ಯದಲ್ಲಿ ಕಂಡುಬಂದಿದೆ. ಇದರ ಬಳಿಕ ಬಿಎಂಸಿ ರೇಖಾ ಮನೆಯ ಹೊರಗಡೆ ಕಂಟೈನ್ಮೆಂಟ್ ಝೋನ್ ಎಂದು ಬೋರ್ಡ್ ಹಾಕಿದೆ.

ಆಕೆಗೆ ಪರೀಕ್ಷೆ ಮಾಡುವಂತೆ ನಾವು ಒತ್ತಾಯಿಸುವುದಿಲ್ಲ. ಆಕೆಗೆ ಅತ್ಯಧಿಕ ಅಪಾಯದ ಸಂಭವ ಕಡಿಮೆ ಮತ್ತು ಅವರು ಬೇಕೆಂದಾಗ ಪರೀಕ್ಷೆ ಮಾಡಿಸಿಕೊಳ್ಳಬಹುದು ಎಂದು ಬಿಎಂಸಿ ಹೇಳಿದೆ.