ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಪುತ್ರನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಪುತ್ರನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

HSA   ¦    Oct 17, 2020 06:47:40 PM (IST)
ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಪುತ್ರನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

ಮುಂಬಯಿ: ಬಾಲಿವುಡ್ ನ ಹಿರಿಯ ನಟ ಮಿಥುನ್ ಚಕ್ರವರ್ತಿ ಪುತ್ರ ಮಹಾಕ್ಷಯ್ ಮೇಲೆ ಮಹಿಳೆಯೊಬ್ಬರು ವಂಚನೆ ಮತ್ತು ಅತ್ಯಾಚಾರ ಪ್ರಕರಣ ದಾಖಲಿಸಿರುವರು.

ಮುಂಬಯಿಯ ಓಶಿವಾರ ಪೊಲೀಸ್ ಠಾಣೆಯಲ್ಲಿ ಗುರುವಾರ ರಾತ್ರಿ 38ರ ಹರೆಯದ ಮಹಿಳೆಯು ದೂರು ದಾಖಲಿಸಿರುವರು.

2015ರಿಂದ 2018ರ ತನಕ ಮಹಾಕ್ಷಯ್ ಜತೆಗೆ ತಾನು ಸಂಬಂಧ ಹೊಂದಿದೆ ಮತ್ತು ಈ ವೇಳೆ ಆತ ಮದುವೆಯ ಭರವಸೆ ನೀಡಿ ತನ್ನನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದ ಎಂದು ಮಹಿಳೆ ದೂರು ದಾಖಲಿಸಿರುವಳು.

2015ರಲ್ಲಿ ಮಹಾಕ್ಷಯ್ ಅಂಧೇರಿ ಪಶ್ಚಿಮದ ಆದರ್ಶ ನಗರದಲ್ಲಿ ಖರೀದಿಸಿದ ಫ್ಲ್ಯಾಟ್ ಗೆ ಹೋದ ವೇಳೆ ಆತ ತನಗೆ ಪಾನೀಯದಲ್ಲಿ ಅಮಲು ಪದಾರ್ಥ ಬೆರೆಸಿ ಆತ್ಮಹತ್ಯೆ ಮಾಡಿದ್ದ ಎಂದು ಮಹಿಳೆ ದೂರಿರುವಳು.