ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ `ಕೊಡವರ ಸಿಪಾಯಿ’ ಸಿನಿಮಾ ಆಯ್ಕೆ

ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ `ಕೊಡವರ ಸಿಪಾಯಿ’ ಸಿನಿಮಾ ಆಯ್ಕೆ

CI   ¦    Feb 24, 2020 05:38:07 PM (IST)
ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ `ಕೊಡವರ ಸಿಪಾಯಿ’ ಸಿನಿಮಾ ಆಯ್ಕೆ

ಮಡಿಕೇರಿ: ತೀತಿಮಾಡ ಅರ್ಜುನ್ ದೇವಯ್ಯ, ತೇಜಸ್ವಿನಿ ಶರ್ಮಾ ಮುಖ್ಯ ಪಾತ್ರದಲ್ಲಿರುವ ಕೊಡವರ ಸಿಪಾಯಿ ಕೊಡವ ಭಾಷಾ ಚಲನಚಿತ್ರ ಬೆಂಗಳೂರಿನಲ್ಲಿ ಆಯೋಜಿತ ಅಂತರರಾಷ್ಟ್ರೀಯ  ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ.

ಬೆಂಗಳೂರಿನಲ್ಲಿ ಇದೇ 26ರಿಂದ ಮಾರ್ಚ್ 4ರವರೆಗೆ ಆಯೋಜಿತ ಅಂತರರಾಷ್ಟ್ರೀಯ  ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲು ಆಯ್ಕೆಯಾಗಿದೆ. ಚಿತ್ರೋತ್ಸವಕ್ಕೆ 220ಕ್ಕೂ ಅಧಿಕ ಚಿತ್ರಗಳು ಪ್ರದರ್ಶನ ಕ್ಕಾಗಿ ಅರ್ಜಿ ಸಲ್ಲಿಸಿದ್ದವು. ಈ ಪೈಕಿ  1.05 ಗಂಟೆ ಅವಧಿಯ ಕೊಡವರ ಸಿಪಾಯಿ ಸೇರಿದಂತೆ 25 ಚಿತ್ರಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಕಳೆದ ಡಿಸಂಬರ್ ನಲ್ಲಿ ಕೊಡವರ ಸಿಪಾಯಿ ಕೊಲ್ಕೋತ್ತದಲ್ಲಿ ನಡೆದ ಅಂತರರಾಷ್ಟ್ರೀಯ ಸಿನಿ ಉತ್ಸವದಲ್ಲಿಯೂ ಪ್ರದರ್ಶನ ಕಂಡಿತ್ತು.

ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ತೆರೆಕಂಡಿದ್ದ ಕೊಡವರ ಸಿಪಾಯಿ ಕೊಡಗಿನ ಬಹುತೇಕ ಊರುಗಳಲ್ಲಿ ಯಶಸ್ವಿ ಪ್ರದಶ9ನ ಕಂಡಿತ್ತು. ಮೈಸೂರು ಕೊಡವ ಸಮಾಜದಲ್ಲಿಯೂ ಪ್ರದರ್ಶನ ಕಂಡ ಕೊಡವರ ಸಿಪಾಯಿ ಫೆ.28ರಂದು ಬೆಂಗಳೂರು ಕೊಡವ ಸಮಾಜದಲ್ಲಿಯೂ ಪ್ರದರ್ಶನ ಕಾಣುತ್ತಿದೆ. ಈವರೆಗೆ 100ಕ್ಕೂ ಅಧಿಕ ಪ್ರದರ್ಶನ ಕಂಡ ಹೆಗ್ಗಳಿಕೆಯ  ಕೊಡವರ ಸಿಪಾಯಿ ಕೊಡಗಿನ ಸೈನಿಕನೋರ್ವ ಕರ್ತವ್ಯದಿಂದ ನಿವೃತ್ತನಾದ ಬಳಿಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮತ್ತು ನಿವೃತ್ತ ಯೋಧನ ಬದುಕು ಬವಣೆಯ ಕಥೆ ಹೊಂದಿದೆ. ಉಳುವಗಂಡ ಕಾವೇರಿ ಚಿತ್ರಕಥೆ ಬರೆದಿರುವ ಕೊಡವರ ಸಿಪಾಯಿಗೆ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ನಿರ್ದೇಶನವಿದೆ.