ಪೋರ್ಚುಗಲ್ ಗೆಳೆಯನ ಜತೆ ರಮ್ಯಾ ವಿವಾಹ?

ಪೋರ್ಚುಗಲ್ ಗೆಳೆಯನ ಜತೆ ರಮ್ಯಾ ವಿವಾಹ?

HSA   ¦    Aug 14, 2019 06:03:44 PM (IST)
ಪೋರ್ಚುಗಲ್ ಗೆಳೆಯನ ಜತೆ ರಮ್ಯಾ ವಿವಾಹ?

ಬೆಂಗಳೂರು: ನಟಿ, ರಾಜಕಾರಣಿ ರಮ್ಯಾ ತನ್ನ ಬಹುಕಾಲದ ಗೆಳೆಯ ಫೋರ್ಚುಗಲ್ ನ ರಾಫೆಲ್ ಅವರನ್ನು ವಿವಾಹವಾಗಲಿದ್ದಾರೆ ಎಂದು ವರದಿಗಳು ಹೇಳಿವೆ.

ಉದ್ಯಮಿಯಾಗಿರುವ ರಾಫೆಲ್ ಈಗ ದುಬೈಯಲ್ಲಿ ನೆಲೆಸಿದ್ದು, ಅಲ್ಲಿಯೇ ಇವರಿಬ್ಬರು ವಿವಾಹವಾಗುವ ಸಾಧ್ಯತೆಗಳು ಇವೆ ಎಂದು ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.

ರಮ್ಯಾ ಮದುವೆ ಬಗ್ಗೆ ನಟ ಜಗ್ಗೇಶ್ ಅವರು ಟ್ವೀಟ್ ಮಾಡಿ ಶುಭ ಕೋರಿದ್ದಾರೆ. `ಶುಭಮಸ್ತು, ದೀರ್ಘಸುಮಂಗಲೀಯಾಗಿ ನೂರ್ಕಾಲ ಸುಖವಾಗಿ ಬಾಳಿ, ಶುಭ ಹಾರೈಕೆ ಎಂದು ಜಗ್ಗೇಶ್ ತನ್ನ ಟ್ವೀಟ್ ನಲ್ಲಿ ಬರೆದಿದ್ದಾರೆ.

ಆದರೆ ಮದುವೆ ಬಗ್ಗೆ ರಮ್ಯಾ ಅವರಾಗಲಿ ಅಥವಾ ಅವರ ಮನೆಯವರಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ರಮ್ಯಾ ಅವರು ರಾಜಕೀಯ ಪ್ರವೇಶಿಸಿದ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದರು. ಕಳೆದ ಲೋಕಸಭೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲುಂಡ ಬಳಿಕ ರಮ್ಯಾ ಯಾವುದೇ ಕಾರ್ಯಕ್ರಮದಲ್ಲೂ ಕಾಣಿಸಿಕೊಂಡಿಲ್ಲ.