ಭಾರತದ ಪ್ರಪ್ರಥಮ ಸಿಂಗಲ್ ಟೇಕ್ ಚಲನಚಿತ್ರ "ಘರ್ ಪೆ ಬತಾವೊ"

ಭಾರತದ ಪ್ರಪ್ರಥಮ ಸಿಂಗಲ್ ಟೇಕ್ ಚಲನಚಿತ್ರ "ಘರ್ ಪೆ ಬತಾವೊ"

Megha R Sanadi   ¦    Oct 14, 2020 04:36:20 PM (IST)
ಭಾರತದ ಪ್ರಪ್ರಥಮ ಸಿಂಗಲ್ ಟೇಕ್ ಚಲನಚಿತ್ರ "ಘರ್ ಪೆ ಬತಾವೊ"

ಮುಂಬೈ: ಭಾರತೀಯ ಚಲನಚಿತ್ರ ನಿರ್ಮಾಣದಲ್ಲಿ ಒಂದು ಹೊಸ ಸಂಚಲನವನ್ನು ಹೊತ್ತು ತರುತ್ತಿರುವ ಚಿತ್ರ "ಘರ್ ಪೆ ಬತಾವೊ". ಹೌದು ಇದೇ ಮೊದಲ ಬಾರಿಗೆ ಭಾರತೀಯ ಚಲನಚಿತ್ರ ಇತಿಹಾಸದಲ್ಲಿ ಸಿಂಗಲ್ ಟೆಕ್ ನಲ್ಲಿ ಪೂರ್ತಿ ಚಿತ್ರವನ್ನು ಮಾಡಿರುವಂತಹ ಮೊದಲ ಚಿತ್ರ ಇದಾಗಿದೆ.

ಚಿತ್ರದ ಕಥೆ, ನಿರ್ದೇಶನ, ಛಾಯಾಗ್ರಹಣ, ಬರವಣಿಗೆಗಳು ತುಂಬಾ ಚೆನ್ನಾಗಿ ಮೂಡಿ ಬಂದಿದೆ ಇದರ ಕಥೆ ಐದು ವರ್ಷಗಳಿಂದ ಸಂಬಂಧ ಹೊಂದಿದ್ದ ದಂಪತಿಗಳ ಸುತ್ತ ಸುತ್ತುತ್ತದೆ.

ಈ ಚಿತ್ರದಲ್ಲಿ ಪ್ರಿಯಾಂಕಾ ಸೋನವಾನೆ  ಮತ್ತು ಸೌರಭ್ ಗೋಯಲ್ ಮುಖ್ಯ ಪಾತ್ರದಲ್ಲಿದ್ದಾರೆ ಮತ್ತು ಇದನ್ನು ಭಾರತೀಯ ಪರಿಯಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಪ್ರಸ್ತುತಪಡಿಸಿದ ಅಂಕುಷ್ ರೈ ಮತ್ತು ನೆಶು ಸಲೂಜಾ ನಿರ್ಮಿಸಿದ್ದಾರೆ. ನೇಶು ಸಲೂಜಾ ಬರೆದು ನಿರ್ದೇಶಿಸಿದ್ದಾರೆ.

"ನಾನು ಇಡೀ ಚಲನಚಿತ್ರವನ್ನು ಒಂದೇ ಟೇಕ್‌ನಲ್ಲಿ ಚಿತ್ರೀಕರಿಸಿದ್ದೇನೆ, ಹಾಗೂ ಅದನ್ನು ಸರಿಯಾದ ಸಮಯದಲ್ಲಿ ತೆರೆದುಕೊಳ್ಳುತ್ತೇನೆ. ಪ್ರೇಕ್ಷಕರು ಇಷ್ಟಪಡುವಂತೆ ಹಾಗೂ ಎಲ್ಲರೂ ಕುಳಿತು ನೋಡುವಂತಹ ಚಿತ್ರ ಇದಾಗಿದ್ದು, ನೈಸರ್ಗಿಕ ವಾತಾವರಣವು ಚಿತ್ರಕ್ಕೆ ನಿಜವಾದ ಸಂಗೀತವಾಗಿದೆ ಮತ್ತು ಆದ್ದರಿಂದ ನಾನು ಯಾವುದೇ ಹಿನ್ನೆಲೆ ಸ್ಕೋರ್ ಅನ್ನು ಬಳಸಿಕೊಂಡಿಲ್ಲ. ನೈಜ ಪ್ರಪಂಚದ ಅನುಭವವನ್ನು ರಚಿಸಲು ನಾನು ಬಯಸುತ್ತೇನೆ. ನೈಜ ಜನರ ನೈಜ ಕಥೆಗಳನ್ನು ಅವರ ನೈಜ ಸಮಸ್ಯೆಗಳೊಂದಿಗೆ ನಾನು ಯಾವಾಗಲೂ ಹುಡುಕುತ್ತೇನೆ. ಪ್ರೀತಿ ಮತ್ತು ನಷ್ಟದ ವೈಯಕ್ತಿಕ ಕಥೆಗಳು ಸಾರ್ವತ್ರಿಕ ಪ್ರತಿಧ್ವನಿ ಇದಾಗಿದೆ" ಎಂದು ನಿರ್ದೇಶಕ ನೇಶು ಸಲೂಜಾ, ಚಲನಚಿತ್ರ ನಿರ್ಮಾಣದ ಅಸಾಂಪ್ರದಾಯಿಕ ವಿಧಾನದ ಬಗ್ಗೆ ಮಾತನಾಡುತ್ತಾ ಹೇಳಿದರು.

ಈ ಚಿತ್ರವು ಒಟಿಟಿ ಪ್ಲಾಟ್ಫಾರ್ಮ್ ನಲ್ಲಿ ಶೀಘ್ರವೇ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.