ಮತ್ತೊಬ್ಬ ಸೆಲೆಬ್ರಿಟಿಗೆ ಕೊರೋನಾ ಸೋಂಕು

ಮತ್ತೊಬ್ಬ ಸೆಲೆಬ್ರಿಟಿಗೆ ಕೊರೋನಾ ಸೋಂಕು

Jayashree Aryapu   ¦    Apr 05, 2021 04:21:52 PM (IST)
ಮತ್ತೊಬ್ಬ ಸೆಲೆಬ್ರಿಟಿಗೆ ಕೊರೋನಾ ಸೋಂಕು

ಮತ್ತೊಬ್ಬ ಸೆಲೆಬ್ರಿಟಿಗೆ ಕೊರೋನಾ ಸೋಂಕುಬೆಂಗಳೂರು: ಕೆಲದಿನ ಹಿಂದಷ್ಟೇ ಬಾಲಿವುಡ್ ನಟನಿಗೆ ಕೊರೋನಾ ಸೋಂಕು ದೃಢ ಪಟ್ಟಿತ್ತು. ಈಗ ಕೊರೋನಾ ಎರಡನೇ ಅಲೆಗೆ ಮತ್ತೊಬ್ಬ ಸೆಲೆಬ್ರಿಟಿ ಟಾರ್ಗೆಟ್ ಆಗಿದ್ದಾರೆ.

ಹೌದು!, ಸ್ಯಾಂಡಲ್ ವುಡ್ ನ ಸಂಗೀತ ನಿರ್ದೇಶಕ, ಅರ್ಜುನ್ ಜನ್ಯಾಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಸದ್ಯಕ್ಕೆ ಜನ್ಯಾ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಸಣ್ಣ ಪ್ರಮಾಣದ ಕೊರೋನಾ ಲಕ್ಷಣಗಳಿಂದ ಬಳಲುತ್ತಿರುವ ಅರ್ಜುನ್ ಜನ್ಯಾ ಮುನ್ನಚ್ಚೆರಿಕೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ವರ್ಷ ಜನ್ಯಾ ಆಂಜಿಯೋಪ್ಲಾಸ್ಟಿಗೊಳಗಾಗಿದ್ದರು. ಹೀಗಾಗಿ ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುವ ಡ್ಯಾನ್ಸ್ ರಿಯಾಲಿಟಿ ಶೋ ತೀರ್ಪುಗಾರರಾಗಿರುವ ಅರ್ಜುನ್ ಜನ್ಯಾ ಮುಂದಿನ ಎಪಿಸೋಡ್ ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ತಿಳಿದುಬಂದಿದೆ.