ಭಾರತ ಮೂಲದ ನಟಿಗೆ ಕೊವಿಡ್-19 ಸೋಂಕು

ಭಾರತ ಮೂಲದ ನಟಿಗೆ ಕೊವಿಡ್-19 ಸೋಂಕು

HSA   ¦    Mar 19, 2020 03:56:36 PM (IST)
ಭಾರತ ಮೂಲದ ನಟಿಗೆ ಕೊವಿಡ್-19 ಸೋಂಕು

ಲಂಡನ್: ಗೇಮ್ಸ್ ಆಫ್ ಥ್ರೋನ್ಸ್ ಚಿತ್ರದ ಭಾರತೀಯ ಮೂಲದ ಹಾಲಿವುಡ್ ನಟಿ ಇಂದಿರಾ ವರ್ಮಾಗೆ ಕೊರೋನಾ ವೈರಸ್ ಇರುವುದು ದೃಢಪಟ್ಟಿದೆ.

ಇದೇ ಸಿನಿಮಾದ ನಟ ಕ್ರಿಸ್ಟೋಫರ್ ಹಿವಜು ಅವರು ಎರಡು ದಿನಗಳ ಮೊದಲು ಕೊರೋನಾ ತಗುಲಿರುವುದನ್ನು ದೃಢಪಡಿಸಿದ್ದರು. ಈಗ ಇಂದಿರಾ ವರ್ಮಾಗೆ ಕೂಡ ಸೋಂಕು ತಗುಲಿದೆ.

ಇಂದಿರಾ ವರ್ಮಾ ಅವರು ಬುಧವಾರ ಇನ್ ಸ್ಟಾಗ್ರಾಮ್ ನಲ್ಲಿ ಕೊರೋನಾ ಸೋಂಕು ದೃಢಪಟ್ಟಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.

ನಾನು ಹಾಸಿಗೆಯಲ್ಲಿದ್ದೇನೆ ಮತ್ತು ಇದು ಒಳ್ಳೆಯ ವಿಚಾರವಲ್ಲ. ಸುರಕ್ಷಿತ ಮತ್ತು ಆರೋಗ್ಯವಾಗಿರಿ ಹಾಗೂ ನಿಮ್ಮವರಿಗೆ ವಿಧೇಯರಾಗಿರಿ ಎಂದು ಅವರು ಬರೆದಿದ್ದಾರೆ.