ಆದಾಯ ತೆರಿಗೆ ಅಧಿಕಾರಿಗಳ ಮುಂದೆ ರಶ್ಮಿಕಾ ಮಂದಣ್ಣ ಹಾಜರ್

ಆದಾಯ ತೆರಿಗೆ ಅಧಿಕಾರಿಗಳ ಮುಂದೆ ರಶ್ಮಿಕಾ ಮಂದಣ್ಣ ಹಾಜರ್

HSA   ¦    Jan 21, 2020 04:19:31 PM (IST)
ಆದಾಯ ತೆರಿಗೆ ಅಧಿಕಾರಿಗಳ ಮುಂದೆ ರಶ್ಮಿಕಾ ಮಂದಣ್ಣ ಹಾಜರ್

ಮೈಸೂರು: ಆದಾಯ ತೆರಿಗೆ ಇಲಾಖೆಯಿಂದ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಪಡೆದಿದ್ದ ನಟಿ ರಶ್ಮಿಕಾ ಮಂದಣ್ಣ ಅವರು ಮಂಗಳವಾರ ನಗರದ ನಜರಬಾದ್ ನಲ್ಲಿ ಇರುವ ಆದಾಯ ತೆರಿಗೆ ಆಯುಕ್ತರ ಕಚೇರಿಗೆ ಹಾಜರಾದರು.

ಮಂದಣ್ಣ ಅವರು ಹೈದರಾಬಾದ್ ನಲ್ಲಿ ಸಿನಿಮಾದ ಪ್ರಚಾರದಲ್ಲಿದ್ದರು. ಅಲ್ಲಿಂದ ಅವರು ಮೈಸೂರಿಗೆ ಆಗಮಿಸಿರುವರು.

ಎರಡು ಬ್ಯಾಗ್ ಗಳಲ್ಲಿ ದಾಖಲಾತಿಗಳನ್ನು ಹಿಡಿದುಕೊಂಡು ಅವರು ಕಚೇರಿಗೆ ಆಗಮಿಸಿರುವರು.

ಶುಕ್ರವಾರ ಮಂದಣ್ಣ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು.