ಡ್ರಗ್ಸ್ ದಂಧೆ: ಇಂದು ಆ್ಯಂಕರ್ ಅನುಶ್ರೀ ವಿಚಾರಣೆ

ಡ್ರಗ್ಸ್ ದಂಧೆ: ಇಂದು ಆ್ಯಂಕರ್ ಅನುಶ್ರೀ ವಿಚಾರಣೆ

YK   ¦    Sep 26, 2020 08:44:18 AM (IST)
ಡ್ರಗ್ಸ್ ದಂಧೆ: ಇಂದು ಆ್ಯಂಕರ್ ಅನುಶ್ರೀ ವಿಚಾರಣೆ

ಬೆಂಗಳೂರು: ಡ್ರಗ್ಸ್ ವಿಚಾರಣೆ ಸಂಬಂಧ ಇಂದು ನಟಿ, ಆ್ಯಂಕರ್ ಅನುಶ್ರೀ ಮಂಗಳೂರು ಸಿಸಿಬಿ ಮುಂದೆ ಹಾಜರಾಗಲಿದ್ದಾರೆ.

ಈಗಾಗಲೇ ಡ್ರಗ್ಸ್ ಸಂಬಂಧ ಮಂಗಳೂರಿನಲ್ಲಿ ಬಂಧಿತರಾಗಿರುವ ಇಬ್ಬರ ಹೇಳಿಕೆ ಆಧಾರದ ಮೇಲೆ ಅನುಶ್ರೀಗೆ ಸಿಸಿಬಿ ನೋಟಿಸನ್ನು ಜಾರಿ ಮಾಡಿತ್ತು. ಈ ಸಂಬಂಧ ಅಧಿಕಾರಿಗಳು ವಿಚಾರಣೆ ಮಾಡಲಿದ್ದಾರೆ.

ನೋಟಿಸ್ ಬಂದ ದಿನವೇ ಪ್ರತಿಕ್ರಿಯಿಸಿದ ಅನುಶ್ರೀ, ಶುಕ್ರವಾರ ವಿಚಾರಣೆಗೆ ಹಾಜರಾಗುವುದಾಗಿ ಹೇಳಿ, ಮಾತು ತಪ್ಪಿದ್ದರು.

ಮೂಲಗಳ ಪ್ರಕಾರ, ಅನುಶ್ರೀ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯಲ್ಲಿರುವ ನಿರೂಪಕಿ. ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಆನೇಕ ಕಾರ್ಯಕ್ರಮ, ಪಾರ್ಟಿಗಳನ್ನು ನಿರೂಪಿಸಿದ್ದಾರೆ. ಅವರಿಗೆ ಪಾರ್ಟಿಯಲ್ಲಿ ನಡೆಯುತ್ತಿದ್ದ ಕೆಲವು ವಿಚಾರಗಳು ತಿಳಿದಿರುವಹುದು. ಅವರ ಹೇಳಿಕೆಗಳು ಮುಂದಿನ ವಿಚಾರಣೆಗೂ ಸಹಾಯವಾಗಬಹುದು ಎನ್ನಲಾಗಿದೆ.