ಬಾಲಿವುಡ್ ನ ಇನ್ನಷ್ಟು ನಟನಟಿಯರು ಡ್ರಗ್ಸ್ ಮಾಫಿಯಾದಲ್ಲಿ ಭಾಗಿ

ಬಾಲಿವುಡ್ ನ ಇನ್ನಷ್ಟು ನಟನಟಿಯರು ಡ್ರಗ್ಸ್ ಮಾಫಿಯಾದಲ್ಲಿ ಭಾಗಿ

HSA   ¦    Sep 11, 2020 04:05:23 PM (IST)
ಬಾಲಿವುಡ್ ನ ಇನ್ನಷ್ಟು ನಟನಟಿಯರು ಡ್ರಗ್ಸ್ ಮಾಫಿಯಾದಲ್ಲಿ ಭಾಗಿ

ನವದೆಹಲಿ: ಬಾಲಿವುಡ್ ನ ಪ್ರಮುಖ ನಟರು ಹಾಗೂ ನಟಿಯರು ಈಗ ಡ್ರಗ್ಸ್ ಮಾಫಿಯಾದ ವಿಚಾರದಲ್ಲಿ ಮಾದಕ ದ್ರವ್ಯ ನಿಯಂತ್ರಕ(ಎನ್ ಸಿಬಿ)ದ ವಿಚಾರಣೆಗೆ ಒಳಪಡಬೇಕಾದ ಸಾಧ್ಯತೆಗಳು ಇವೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಆತನ ಗೆಳತಿ ರಿಯಾ ಚಕ್ರವರ್ತಿಗೆ ಡ್ರಗ್ಸ್ ಮಾಫಿಯಾ ಜತೆಗೆ ಸಂಬಂಧವಿದ್ದ ಹಿನ್ನೆಲೆಯಲ್ಲಿ ಆಕೆಯನ್ನು ಬಂಧಿಸಲಾಗಿತ್ತು. ಈಗ ಆಕೆ ವಿಚಾರಣೆ ಸಂದರ್ಭದಲ್ಲಿ ಹಲವರ ಹೆಸರನ್ನು ಬಹಿರಂಗಪಡಿಸಿರುವಳು.

ಸುಮಾರು 15 ಮಂದಿ ಬಾಲಿವುಡ್ ನ ನಟನಟಿಯರು ಎನ್ ಸಿಬಿಯಿಂದ ವಿಚಾರಣೆಗೆ ಒಳಪಡುವ ಸಾಧ್ಯತೆಗಳು ಇವೆ ಎಂದು ತಿಳಿದುಬಂದಿದೆ. ಇದರಲ್ಲಿ ಕೆಲವು ಮಂದಿ ಬಿ ದರ್ಜೆಯ ನಟರು ಇದ್ದಾರೆ.