ಅಸುರನ್ ಸಿನಿಮಾದ ನಟ ನಿತೀಶ್ ವೀರಾ ಕೋವಿಡ್ ಗೆ ಬಲಿ

ಅಸುರನ್ ಸಿನಿಮಾದ ನಟ ನಿತೀಶ್ ವೀರಾ ಕೋವಿಡ್ ಗೆ ಬಲಿ

Jayashree Aryapu   ¦    May 17, 2021 04:55:37 PM (IST)
ಅಸುರನ್ ಸಿನಿಮಾದ ನಟ ನಿತೀಶ್ ವೀರಾ ಕೋವಿಡ್ ಗೆ ಬಲಿ

ಚೆನ್ನೈ : ಅಸುರನ್ ಖ್ಯಾತಿಯ ತಮಿಳು ನಟ ನಿತೀಶ್ ವೀರಾ ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿದ್ದಾರೆ. 

ನಿತೀಶ್ ವೀರಾ(45) ನಿಧನರಾಗಿದ್ದಾರೆ. ನಟ ನಿತೀಶ್ ವೀರಾಗೆ ಕೆಲವೇ ದಿನಗಳ ಹಿಂದೆಯಷ್ಟೇ ಕೋವಿಡ್-19 ಪಾಸಿಟಿವ್ ದೃಢಪಟ್ಟಿತ್ತು. ಚೆನ್ನೈ ಆಸ್ಪತ್ರೆಯಲ್ಲಿ ದಾಖಲಾಗಿ ನಿತೀಶ್ ವೀರಾ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ನಿತೀಶ್ ವೀರಾ ಸಾವನ್ನಪ್ಪಿದ್ದಾರೆ.

ಕಳೆದ 20 ವರ್ಷಗಳಿಂದ ಕಾಲಿವುಡ್‍ನಲ್ಲಿ ನಟ ನಿತೀಶ್ ವೀರಾ ಸಕ್ರಿಯರಾಗಿದ್ದಾರೆ. ವಲ್ಲರಸು, ಪುದುಪೇಟೈ, ಪೇರರಸು, ನೇಟ್ರು ಇಂಡ್ರು ಮುಂತಾದ ಚಿತ್ರಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳನ್ನು ನಟ ನಿತೀಶ್ ವೀರಾ ನಿಭಾಯಿಸಿದ್ದರು.

 ನಿತೀಶ್ ವೀರಾಗೆ ಹೆಸರು ತಂದುಕೊಟ್ಟಿದ್ದು ಕಾಲಾ ಚಿತ್ರ. ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಾಲಾ ಚಿತ್ರದಲ್ಲಿ ಕಾತಿರಾವಣ್ ಪಾತ್ರದಿಂದ ನಿತೀಶ್ ವೀರಾ ಕಾಲಿವುಡ್‍ನಲ್ಲಿ ಗುರುತಿಸಿಕೊಂಡರು.