ಮಾಸ್ಕ್ ಧರಿಸಲು ಮನವಿ ಮಾಡಿಕೊಂಡ ಯಶ್-ರಾಧಿಕಾ ಪಂಡಿತ್ ದಂಪತಿ

ಮಾಸ್ಕ್ ಧರಿಸಲು ಮನವಿ ಮಾಡಿಕೊಂಡ ಯಶ್-ರಾಧಿಕಾ ಪಂಡಿತ್ ದಂಪತಿ

HSA   ¦    Jun 20, 2020 04:38:25 PM (IST)
ಮಾಸ್ಕ್ ಧರಿಸಲು ಮನವಿ ಮಾಡಿಕೊಂಡ ಯಶ್-ರಾಧಿಕಾ ಪಂಡಿತ್ ದಂಪತಿ

ಬೆಂಗಳೂರು: ನಟ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ದಂಪತಿ ಕೊವಿಡ್-19 ವಿರುದ್ಧ ಮಾಸ್ಕ್ ಧರಿಸಬೇಕು ಎನ್ನುವ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಅವರು ತಮ್ಮ ಮಗುವಿನೊಂದಿಗೆ ಮಾಸ್ಕ್ ಹಾಕಿಕೊಂಡು ತೆಗೆಸಿಕೊಂಡಿರುವಂತಹ ಫೋಟೊ ಈಗ ವೈರಲ್ ಆಗಿದೆ.

ರಾಧಿಕಾ ಪಂಡಿತ್ ಅವರು ಈ ಫೋಟೊವನ್ನು ಇನ್ ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ವಿಶ್ವದೆಲ್ಲೆಡೆಯಲ್ಲಿ ಹರಡುತ್ತಿರುವಂತಹ ಕೊರೋನಾದಿಂದ ಪಾರಾಗಲು ಮಾಸ್ಕ್ ಧರಿಸುವುದು ಅಗತ್ಯ ಮತ್ತು ಸಾಮಾಜಿಕ ಅಂತರ ಕೂಡ ಕಾಯ್ದುಕೊಳ್ಳಬೇಕು ಎಂದು ಅವರು ಮನವಿ ಮಾಡಿಕೊಂಡಿರುವರು.

ನಮ್ಮ ಹೋರಾಟವು ಇಲ್ಲಿಗೆ ನಿಂತಿಲ್ಲ. ಇದು ತುಂಬಾ ಕಠಿಣ ಸಮಯ. ಆದರೆ ಅದು ಬೇಗನೆ ಕಳೆದು ಹೋಗಲಿದೆ. ಅಲ್ಲಿಯ ತನಕ ನೀವು ಮನೆಯಿಂದ ಹೊರಗೆ ಹೋಗುವ ವೇಳೆ ಮಾಸ್ಕ್ ಧರಿಸಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಬರೆದಿರುವರು.