ಬಾಲಿವುಡ್: ಬಾಲಿವುಡ್‌ನ ಹಾಟ್ ಕತ್ರಿನಾ ಕೈಫ್-ವಿಕ್ಕಿ ಕೌಶಲ್ ಜೋಡಿ ಗೃಹಸ್ಥಾಶ್ರಮ ಪ್ರವೇಶಿಸಿದೆ.ರಾಜಸ್ಥಾನದ ಖಾಸಗಿ ಕೋಟೆಯೊಂದರಲ್ಲಿ ಹಸೆಮಣೆ ಏರಿರುವ ಈ ಜೋಡಿ, ತಮ್ಮ ಮದುವೆಯ ಸಪ್ತಾಹದ ಆರಂಭಕ್ಕೂ ಮುನ್ನ ಆಯೋಜಿಸಲಾಗಿದ್ದ ಸಂಗೀತ ರಾತ್ರಿಯ ವೇಳೆ ವಿಶೇಷವಾದ ಕೇಕ್ ಒಂದನ್ನು ಕತ್ತರಿಸಿದೆ.
5-ಹಂತದ ಈ ಕೇಕ್ ಸಮಾರಂಭಕ್ಕೆ ಆಗಮಿಸಿದ್ದ ಪ್ರತಿಯೊಬ್ಬರ ಗಮನ ಸೆಳೆದಿದೆ ಎನ್ನಲಾಗಿದೆ.
ದೆಹಲಿ ಮೂಲದ ಪ್ಯಾಟಿಸ್ಸಿಯರ್‌ನಿಂದ ಸಿದ್ಧವಾದ ಈ ವಿಶೇಷ ಕೇಕ್ 4.5 ಲಕ್ಷ ರೂಪಾಯಿ ವೆಚ್ಚದಲ್ಲಿ ತಯಾರಿಸಲಾಗಿದೆಯಂತೆ. ಮದುವೆಯ ಜಾಗವಾದ ಫೋರ್ಟ್ ಬನ್ವಾರಾದಲ್ಲೇ ಈ ಕೇಕ್ ತಯಾರಿಸಲಾಗಿದೆ ಎನ್ನಲಾಗಿದೆ.