News Kannada
Monday, October 03 2022

ಬಾಲಿವುಡ್

ಜೀವನದಲ್ಲಿ ನನ್ನ ಆಯ್ಕೆಗಳು ಇತರ ಜನರು ಅನುಕರಿಸುವಂತಹದ್ದಲ್ಲ; ಸನ್ನಿ ಲಿಯೋನ್ - 1 min read

Photo Credit :

ಮುಂಬೈ :  ಪ್ರಸ್ತುತ ತನ್ನ ಹೊಸ ವೆಬ್ ಸೀರೀಸ್ ‘ಅನಾಮಿಕಾ’ದ ಪ್ರಚಾರದಲ್ಲಿ ನಿರತರಾಗಿರುವ ನಟಿ ಸನ್ನಿ ಲಿಯೋನ್ ತಮ್ಮ ಜೀವನ ಮತ್ತು ವೃತ್ತಿಜೀವನದ ಬಗ್ಗೆ ಮಾತನಾಡಿದ್ದಾರೆ.

“ಜೀವನದಲ್ಲಿ ನನ್ನ ಆಯ್ಕೆಗಳು ಇತರ ಜನರು ಅನುಕರಿಸುವಂತಹದ್ದಲ್ಲ. ಜನರು ಆ ಆಯ್ಕೆಗಳನ್ನು ಮಾಡಬೇಕೆಂದು ನಾನು ಬಯಸುವುದಿಲ್ಲ. ನನಗೆ ನಾನು ಸುಳ್ಳು ಹೇಳುತ್ತಿಲ್ಲ. ನಾನು ಯಾರೆಂಬುದರ ಬಗ್ಗೆ ಇತರರಿಗೆ ಸುಳ್ಳು ಹೇಳುತ್ತಿಲ್ಲ” ಎಂದು ಸನ್ನಿ ಲಿಯೋನ್ ಹೇಳಿದ್ದಾರೆ.

ಕೆನಡಾದಿಂದ ಹತ್ತು ವರ್ಷಗಳ ಹಿಂದೆ ಭಾರತಕ್ಕೆ ಬಂದ ಸನ್ನಿ ಲಿಯೋನ್ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಾಲಿವುಡ್ ಗೆ ಎಂಟ್ರಿ ನೀಡಿದ್ದ ಆಕೆ, ಪೂಜಾ ಭಟ್ ರ ಜಿಸ್ಮ್ 2 ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಸದ್ಯ ತಾನು ಜೀವನದಲ್ಲಿ ತೃಪ್ತಿ ಹೊಂದಿದ್ದೇನೆ. ನಾನು ಮತ್ತು ಡೇನಿಯಲ್ ನಮ್ಮ ಜೀವನವನ್ನು ಪ್ರೀತಿಸುತ್ತೇವೆ. ನಾವು ಅದರ ಪ್ರತಿಯೊಂದು ಭಾಗವನ್ನು ಪ್ರೀತಿಸುತ್ತೇವೆ, ನಾವು ನಮ್ಮ ಕುಟುಂಬವನ್ನು ಪ್ರೀತಿಸುತ್ತೇವೆ ಮತ್ತು ಅವರೊಂದಿಗೆ ಕಳೆಯುವ ಸಮಯವನ್ನು ನಾವು ಪ್ರೀತಿಸುತ್ತೇವೆ ಎಂದು ಒಂದು ಕಾಲದಲ್ಲಿ ನೀಲಿ ಚಿತ್ರತಾರೆಯಾಗಿದ್ದ ಸನ್ನಿ ಲಿಯೋನ್ ಹೇಳುತ್ತಾರೆ.

ಸನ್ನಿ ಲಿಯೋನ್ ಮುಖ್ಯಪಾತ್ರದಲ್ಲಿ ನಟಿಸಿರುವ ‘ಅನಾಮಿಕ’ ವೆಬ್ ಸಿರೀಸ್ ಮಾರ್ಚ್ 10ರಂದು ತೆರೆಕಂಡಿದೆ. ವಿಕ್ರಂ ಭಟ್ ನಿರ್ದೇಶನದ ವೆಬ್ ಸಿರೀಸ್ ನಲ್ಲಿ ಸನ್ನಿ ಏಜೆಂಟ್ ಎಂ ಎಂಬ ಹಂತಕಿಯ ಪಾತ್ರ ನಿರ್ವಹಿಸಿದ್ದಾರೆ.

See also  ಮುಂಬೈ: ಅಪ್ರಾಪ್ತೆಯನ್ನು ಅನುಚಿತವಾಗಿ ಸ್ಪರ್ಶಿಸಿದ ವೃದ್ಧನಿಗೆ ಜೈಲು ಶಿಕ್ಷೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು