News Kannada
Tuesday, June 06 2023
ಬಾಲಿವುಡ್

ಎರಡು ದಿನಗಳಲ್ಲಿ ವಿಶ್ವಾದ್ಯಂತ 219.6 ಕೋಟಿ ಕಲೆಕ್ಷನ್ ಮಾಡಿದ ‘ಪಠಾಣ್’

'Pathan' collects Rs 219.6 crore worldwide in two days
Photo Credit : IANS

ನಟ ಶಾರುಖ್​ ಖಾನ್​ ಅವರು ಗೆದ್ದು ಬೀಗಿದ್ದಾರೆ. ಅವರು ನಟಿಸಿರುವ ‘ಪಠಾಣ್​’ ಚಿತ್ರ ಭಾರತ ಮಾತ್ರವಲ್ಲದೇ ವಿದೇಶದಲ್ಲೂ ಸಖತ್​ ಕಮಾಯಿ ಮಾಡುತ್ತಿದೆ. ಇದು ಅಭಿಮಾನಿಗಳ ಸಂತಸಕ್ಕೆ ಕಾರಣ ಆಗಿದೆ.

ಮೊದಲ ದಿನ ವಿಶ್ವಾದ್ಯಂತ ‘ಪಠಾಣ್​’ ಚಿತ್ರಕ್ಕೆ 106 ಕೋಟಿ ರೂಪಾಯಿ ಕಲೆಕ್ಷನ್​ ಆಗಿತ್ತು. 2ನೇ ದಿನ 113.60 ಕೋಟಿ ರೂಪಾಯಿ ಆಗಿದೆ. ಎರಡು ದಿನಕ್ಕೆ ಒಟ್ಟು 219.60 ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ.

ಇದು ಶಾರುಖ್​ ಖಾನ್​ ಅವರ ಕಮ್​ಬ್ಯಾಕ್​ ಸಿನಿಮಾ. ಆ ಕಾರಣದಿಂದ ಅಭಿಮಾನಿಗಳಿಗೆ ನಿರೀಕ್ಷೆ ಜೋರಾಗಿತ್ತು. ನಿರೀಕ್ಷೆಯ ಮಟ್ಟವನ್ನು ತಲುಪುವ ರೀತಿಯಲ್ಲಿ ‘ಪಠಾಣ್​’ ಚಿತ್ರ ಮೂಡಿಬಂದಿದೆ. ಎಲ್ಲ ಕಡೆಗಳಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

‘ಪಠಾಣ್​’ ಸಿನಿಮಾಗೆ ಸಿದ್ದಾರ್ಥ್​ ಆನಂದ್​ ಅವರು ನಿರ್ದೇಶನ ಮಾಡಿದ್ದಾರೆ. ಅವರ ಮತ್ತು ಶಾರುಖ್​ ಖಾನ್​ ಕಾಂಬಿನೇಷನ್​ಗೆ ಜನಮೆಚ್ಚುಗೆ ಸಿಕ್ಕಿದೆ. ಈ ಸಿನಿಮಾದಲ್ಲಿ ಜಾನ್​ ಅಬ್ರಾಹಂ ಅವರು ವಿಲನ್​ ಆಗಿ ನಟಿಸಿದ್ದಾರೆ.

ದೀಪಿಕಾ ಪಡುಕೋಣೆ ಮತ್ತು ಶಾರುಖ್​ ಖಾನ್​ ಅವರು ‘ಪಠಾಣ್​’ ಚಿತ್ರದ ಮೂಲಕ ನಾಲ್ಕನೇ ಬಾರಿಗೆ ಜೊತೆಯಾಗಿ ನಟಿಸಿದ್ದಾರೆ. ಅವರ ಅಭಿಮಾನಿಗಳಿಗೆ ಈ ಸಿನಿಮಾ ಮನರಂಜನೆಯ ರಸದೌತಣ ನೀಡಿದೆ. ಎಲ್ಲೆಡೆ ಹೌಸ್​ ಪುಲ್​ ಆಗುತ್ತಿದೆ.

See also  ಕೊಪ್ಪಳ: ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

30409

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು