ಮಂಗಳೂರು: ಒಂದು ಮೊಟ್ಟೆ ಕಥೆ ಚಿತ್ರ ತಂಡದ ನೇತೃತ್ವದಲ್ಲಿ ವೈಭವ್ ಫ್ಲಿಕ್ಸ್ ಅಡಿಯಲ್ಲಿ, ಮ್ಯಾಂಗೋ ಪಿಕಲ್ ಬ್ಯಾನರ್ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡ “ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್” ತುಳು ಚಿತ್ರ ಮೇ ೨೦ ರಂದು ಕರಾವಳಿ ಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರ ನಿರ್ದೇಶಕ ರಾಹುಲ್ ಅಮೀನ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ಚಿತ್ರವು ಸಂಪೂರ್ಣ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಆಗಿದ್ದು ಚಿತ್ರದ ಟೀಸರ್ ಬಿಡುಗಡೆ ಆದ ಕೆಲವೇ ದಿನದಲ್ಲಿ ಲಕ್ಷಕ್ಕೂ ಅಧಿಕ ವೀಕ್ಷಣೆ ಆಗಿದ್ದು ತುಳು ಚಿತ್ರ ರಂಗದಲ್ಲೇ ಇತಿಹಾಸ ಸೃಷ್ಟಿಸಿ ಸಂಚಲನ ಮೂಡಿಸಿದೆ.
ಈ ಚಿತ್ರ ಈಗಾಗಲೇ ೧೧ ಹೊರ ದೇಶಗಳಲ್ಲಿ ಮತ್ತು ದೇಶದ ೬ ಕಡೆಗಳಲ್ಲಿ ಯಶಸ್ವಿ ಪ್ರಿಮಿಯರ್ ಶೋ ನೀಡಿದ್ದು ಕರಾವಳಿ ತುಳು ಅಭಿಮಾನಿಗಳಿಂದ ಪ್ರಶಂಸೆ ಪಡೆದಿದೆ ಎಂದವರು ಹೇಳಿದರು. ಬಳಿಕ ತುಳು ಹಾಸ್ಯ ನಟ ಬೋಜರಾಜ್ ವಾಮಂಜೂರು ಮಾತನಾಡಿ ರಾಜ್ ಸೌಂಡ್ ಆ್ಯಂಡ್ ಲೈಟ್ಸ್ ದೇಶಾದ್ಯಂತ ಮಾತ್ರವಲ್ಲದೆ ವಿದೇಶದಲ್ಲೂ ಬಾರಿ ಸದ್ದು ಮಾಡಿದ ಚಿತ್ರ ಇದು ಈ ಚಿತ್ರದಲ್ಲಿ ಅನೇಕ ಯುವಕರ ತಂಡದ ಶ್ರಮ ಇದೆ ಈ ಶ್ರಮಕ್ಕೆ ಕರಾವಳಿಯ ಪ್ರೇಕ್ಷಕರ ಸಹಕಾರ ಅತೀ ಅಗತ್ಯ ಎಲ್ಲರೂ ತುಳು ಚಿತ್ರಕ್ಕೆ ನೋಡುವವರು ಹೆಚ್ಚಾಗಿ ಹಾಸ್ಯಕ್ಕೆ ಒತ್ತು ನೀಡ್ತಾರೆ ಪ್ರೇಕ್ಷಕರಿಗೆ ಈ ಚಿತ್ರದಲ್ಲಿ ಯಾವುದೇ ನಿರಾಶೆ ಆಗದು ಅದ್ದೂರಿ ಮತ್ತು ಹಾಸ್ಯಾಸ್ಪದ ಮತ್ತು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಚಿತ್ರವಾಗಿದೆ. ಕರಾವಳಿಗರು ಇದಕ್ಕೆ ಸಂಪೂರ್ಣ ಸಹಕಾರ ನೀಡಬೇಕೆಂದವರು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಚಿತ್ರ ನಿರ್ಮಾಪಕ ಆನಂದ್ ಎನ್ ಕುಂಪಲ, ಚಿತ್ರ ನಟ ವಿನೀತ್ ಕುಮಾರ್, ಚಿತ್ರ ನಟಿ ಚೈತ್ರ ಶೆಟ್ಟಿ, ಸುಹಾನ್ ಪ್ರಸಾದ್, ಪವನ್ ಕುಮಾರ್, ನಿತಿನ್ ರಾಜ್ ಶೆಟ್ಟಿ, ಅರ್ಪಿತ್ ಅಡ್ಯಾರ್ ಮತ್ತಿತರರು ಉಪಸ್ಥಿತರಿದ್ದರು.