NewsKarnataka
Friday, January 28 2022

ಇತರೆ

ಕ್ರೀಡಾ ಏಕಲವ್ಯರ ಗುರು ರಾಜೇಂದ್ರ ಪ್ರಸಾದ್

ಸತತ ಪ್ರಯತ್ನ ಹಾಗೂ ಪರಿಶ್ರಮದಿಂದ ಮಿಂದೆದ್ದು, ವೆಯ್ಟ್ ಲಿಫ್ಟಿಂಗ್‌ನಂತಹ ಕಠಿಣ ಸವಾಲುಗಳನ್ನು ನೀರು ಕುಡಿದಂತೆ ಸರಾಗವಾಗಿ ಮಾಡುವ ಇವರು ಉಜಿರೆಯಂತಹಾ ಗ್ರಾಮೀಣ ಪ್ರದೇಶದ ಕಾಲೇಜಿನಲ್ಲಿ ಹೊರ ಹೊಮ್ಮುತ್ತಿದ್ದ ಅದೆಷ್ಟೋ ಪ್ರತಿಭೆಗಳ ತರಬೇತುದಾರರಾಗಿದ್ದರು. ವೆಯ್ಟ್ ಲಿಫ್ಟಿಂಗ್‌ನಲ್ಲಿ ರಾಜ್ಯದ ಕೆಲವೇ ಕೆಲವು ತರಬೇತುದಾರರಲ್ಲಿ ಎಸ್ ಡಿ ಎಂ ಕಾಲೇಜಿನ ದೈಹಿಕ ನಿರ್ದೇಶಕರಾಗಿದ್ದ ರಾಜೆಂದ್ರ ಪ್ರಸಾದ್ ಕೂಡ ಒಬ್ಬರು. ಇವರ ಗರಡಿಯಲ್ಲಿ ಪಳಗಿದ ಮೂವರು ವಿದ್ಯಾರ್ಥಿಗಳು ತಮ್ಮ ಕ್ರೀಡಾ ಜೀವನದಲ್ಲಿ ಅತ್ಯುನ್ನತ ಸಾಧನೆಯನ್ನು ಮಾಡಿದ್ದಾರೆ. ಅದಲ್ಲದೇ ಹಲವಾರು ಕ್ರೀಡಾ ಪ್ರತಿಭೆಗಳು ತಮ್ಮ ಜೀವನದ ಹಾದಿಯನ್ನು ಕಂಡುಕೊಂಡಿದ್ದಾರೆ. ಸತತ ಪ್ರಯತ್ನ ಹಾಗೂ ಪರಿಶ್ರಮ ಪಟ್ಟರೆ ಎಂತಹದ್ದೇ ಸವಾಲುಗಳು ಎದುರಾದರೂ ಅದನ್ನು ಸುಲಭವಾಗಿ ಎದುರಿಸಬಹುದು ಅನ್ನೋ ನೀತಿ ಪಾಠವನ್ನು ತಿಳಿದವರು ರಾಜೇಂದ್ರ ಪ್ರಸಾದ್.

ಸುಮಾರು ೧೩ ವರ್ಷದ ಹಿಂದೆ ವೆಯ್ಟ್ ಲಿಫ್ಟಿಂಗ್ ತರಬೇತುದಾರರಾಗಿ ನೇಮಕಗೊಂಡು ಅದೆಷ್ಟೋ ಯುವ ಪ್ರತಿಭೆಗಳಿಗೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯಮಟ್ಟದಲ್ಲಿ ಹೆಸರು ಪಡೆಯಲು ಸಹಕಾರಿಯಾಗಿದ್ದಾರೆ. ಇವರ ಗರಡಿಯಲ್ಲಿ ಪಳಗಿದ ಮೂರು ಯುವ ಪ್ರತಿಭೆಗಳು ೨೦೧೧ರಲ್ಲಿ ನೇತ್ರಾವತಿ, ೨೦೧೨ರಲ್ಲಿ ನೇಹಾ ಹಾಗೂ ೨೦೧೮ರಲ್ಲಿ ಗುರುರಾಜ್ ಕರ್ನಾಟಕ ರಾಜ್ಯ ಏಕಲವ್ಯ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೆ ಇವರ ಶಿಷ್ಯ ಗುರುರಾಜ್ ಆಸ್ಟ್ರೇಲಿಯಾ ಗೋಲ್ಡ್ ಕೋಸ್ಟ್ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ಲ್ ವೆಯ್ಟ್ ಲಿಫ್ಟಿಂಗ್‌ನಲ್ಲಿ ಬೆಳ್ಳಿಯ ಪದಕವನ್ನು ತನ್ನದಾಗಿಸಿಕೊಂಡಿದ್ದರು. ಇವರಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದ ಸಾಧನೆಯಿಂದಾಗಿ ಸರ್ಕಾರಿ ಹುದ್ದೆಗಳಾದ ಅರಣ್ಯ ಇಲಾಖೆ, ವಾಯು ಪಡೆ, ಆರ್ಮಿ ಹಾಗೂ ರೈಲ್ವೆ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ.

ಮೂಲತಃ ಪುತ್ತೂರಿನ ರಾಮಕೃಷ್ಣ.ಎಂ ಮತ್ತು ಇಂದಿರಾವತಿ.ಎ ದಂಪತಿಯ ಪುತ್ರ ರಾಜೇಂದ್ರ ಪ್ರಸಾದ್ ಸಣ್ಣವರಿದ್ದಾಗಲೇ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಅತೀವ ಆಸಕ್ತಿ ಹೊಂದಿದ್ದು ಕ್ರಿಕೆಟ್‌ಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಪುತ್ತೂರಿನ ಸೈಂಟ್ ಫಿಲೋಮಿನ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ತನ್ನ ಗೆಳೆಯನ ಸಲಹೆಯ ಮೇರೆಗೆ ವೆಯ್ಟ್ ಲಿಫ್ಟಿಂಗ್‌ನತ್ತ ಮುಖ ಮಾಡಿದರು. ಅಂದು ಅವರಿಗೆ ಚೊಚ್ಚಲ ತರಬೇತುದಾರರಾಗಿ ಸಿಕ್ಕವರೇ ಪುತ್ತೂರಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಎವರೆಷ್ಟ್ ರೋಡ್ರಿಗಸ್.

ಈ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಮಹದಾಸೆಯನ್ನು ಹೊಂದಿದ್ದ ಇವರಿಗೆ ಪ್ರಸ್ತುತ ಎಡಪದವು ಸ್ವಾಮಿ ವಿವೇಕಾನಂದ ಕಾಲೇಜಿನ ದೈಹಿಕ ನಿರ್ದೇಶಕರಾದ ಕಾವು ಪ್ರೇಮನಾಥ ಶೆಟ್ಟಿ ಬೆನ್ನೆಲುಬಾಗಿ ನಿಂತರು. ನಂತರದ ದಿನಗಳಲ್ಲಿ ವೆಯ್ಟ್ ಲಿಫ್ಟಿಂಗ್‌ನಲ್ಲಿ ಏಳು ಬಾರಿ ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ ಹಿರಿಮೆ ಇವರದ್ದು, ಮಾತ್ರವಲ್ಲದೆ ರಾಜ್ಯ ಮಟ್ಟದಲ್ಲಿ ಬೆಸ್ಟ್ ವೆಯ್ಟ್ ಲಿಫ್ಟರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

11034
Gayathri Gowda

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.