ಬಾದಾಮ್ ಶೊರಬಾ ಒಂದು ಬಗೆ ಸೂಪ್ ಆಗಿದೆ. ಬಹಳ ರುಚಿಕರವಾದ ಸೂಪ್ ಇದು. ಬನ್ನಿ ನಾವು ಇವತ್ತು ಬಾದಾಮ್ ಶೊರಬಾ ತಯಾರಿಸೋಣ.
ಬೇಕಾಗುವ ಸಾಮಾಗ್ರಿಗಳು :ಬಾದಾಮ್ 3/4 ಕಪ್
ಹಾಲು 1 1/2 ಕಪ್
ಬೆಣ್ಣೆ 1 ಚಮಚ
ಮೈದಾ 3/4 ಕಪ್
ಬಿಸಿ ನೀರು 1 1/2 ಕಪ್
ಉಪ್ಪು ರುಚಿಗೆ ತಕ್ಕಷ್ಟು
ಕರಿಮೆಣಸು ಸ್ವಲ್ಪ
ಗರಂ ಮಸಾಲ
ಸಕ್ಕರೆ ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ :
ಬಾದಾಮ್‌ಅನ್ನು ಅರ್ಧ ಗಂಟೆ ಬಿಸಿ ನೀರಿನಲ್ಲಿ ನೆನೆಸಿಡಿ. ಅದು ಸರಿಯಾಗಿ ಮೆದುವಾದ ನಂತರ 7ರಿಂದ 8ಬಾದಾಮ್ ತುಂಡುಗಳನ್ನು ತೆಗೆದಿಟ್ಟುಕೊಳ್ಳಿ. ಇದರಿಂದ ಸೂಪನ್ನು ಅಲಂಕರಿಸಬಹುದು. ಈಗ ಬಾದಾಮ್‌ಗೆ ಹಾಲು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ಬಾದಾಮ್ ತುಂಡುಗಳು ಕಾಣುತ್ತಿರಬೇಕು. ನಾನಾ ಸ್ಟಿಕ್ ತವಾ ತೆಗೆದುಕೊಂಡು ಅದರಲ್ಲಿ ಒಂದು ಚಮಚ ಬೆಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ 3/4 ಚಮಚ ಮೈದಾ ಹಿಟ್ಟನ್ನು ಬೆರೆಸಿ. ಈ ಮಿಶ್ರಣವನ್ನು 30 ಸೆಕೆಂಡುಗಳ ಕಾಲ ಸರಿಯಾಗಿ ಕುದಿಬರಿಸಿ. ಇದು ಕುದಿ ಬರುತ್ತಿರುವಾಗ ಅದಕ್ಕೆ ಹಾಲನ್ನು ಬೆರೆಸಿ ಮತ್ತೆ ಮಿಶ್ರ ಮಾಡಿ. ಇದಕ್ಕೆ ಸ್ವಲ್ಪ ನೀರು ಬೆರೆಸಿ. ನಂತರ ಸ್ವಲ್ಪ ಉಪ್ಪು, ಗರಂ ಮಸಾಲೆ, ಕರಿಮೆಣಸು ಹಾಕಿ.ಕೊನೆಗೆ ಬಾದಾಮ್ ತುಂಡುಗಳನ್ನು ಹಾಕಿ ಅಲಂಕರಿಸಿ.