News Kannada
Monday, October 03 2022

ಅಡುಗೆ ಮನೆ

ಆಲೂ ಮಂಚೂರಿ - 1 min read

Photo Credit :

ಆಲೂ ಮಂಚೂರಿ

ಬೇಕಾಗುವ ಸಾಮಗ್ರಿಗಳು:
*ಆಲೂ ಗೆಡ್ಡೆ : 2
*ಕಾರ್ನ್ ಫ್ಲೋರ್: 1 ಕಪ್
*ಅಚ್ಚ ಖಾರದ ಪುಡಿ : 1 ಚಮಚ
*ಉಪ್ಪು : ರುಚಿಗೆ ತಕ್ಕಷ್ಟು
*ಎಣ್ಣೆ : ಕರಿಯುವುದಕ್ಕೆ
*ಈರುಳ್ಳಿ : 1 ದೊಡ್ಡದು, ಸಣ್ಣಗೆ ಹೆಚ್ಚಿದ್ದು
*ಶುಂಠಿ ಬೆಳ್ಳುಳ್ಳಿ ಪೇಸ್ಟ್: ಸ್ವಲ್ಪ
*ಶುಂಠಿ ಬೆಳ್ಳುಳ್ಳಿ ಸಣ್ಣಗೆ ಹೆಚ್ಚಿದ್ದು: ಸ್ವಲ್ಪ
*ದಪ್ಪ ಮೆಣಸಿನಕಾಯಿ: 1, ಸಣ್ಣಗೆ ಹೆಚ್ಚಿದ್ದು
*ಚಿಲ್ಲಿ ಸಾಸ್ : 1 ಚಮಚ
*ಟೊಮೇಟೋ ಸಾಸ್ : 3 ಚಮಚ
*ಕೊತ್ತಂಬರಿ ಸೊಪ್ಪು : ಸಣ್ಣಗೆ ಹೆಚ್ಚಿದ್ದು ಸ್ವಲ್ಪ.

ಮಾಡುವ ವಿಧಾನ: ಮೊದಲಿಗೆ, ಆಲೂಗೆಡ್ಡೆಯನ್ನು ಚೆನ್ನಾಗಿ ತೊಳೆದು, ಅದರ ಸಿಪ್ಪೆಯನ್ನು ತೆಗೆದು ಸಣ್ಣ ಸಣ್ಣ ಹೋಳುಗಳನ್ನಾಗಿ ಕತ್ತರಿಸಿಕೊಳ್ಳಿ. ಒಂದು ಬೌಲ್ ನಲ್ಲಿ, ಕಾರ್ನ್ ಫ್ಲೋರ್, ಅಚ್ಚ ಖಾರದ ಪುಡಿ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ನೀರು ಹಾಕಿ ಕಲಿಸಿಟ್ಟುಕೊಳ್ಳಬೇಕು. ಸಣ್ಣ ಸಣ್ಣ ಹೋಳುಗಳನ್ನಾಗಿ ಕತ್ತರಿಸಿಕೊಂಡ ಆಲೂಗೆಡ್ಡೆಯನ್ನು ಅದರಲ್ಲಿ ಅದ್ದಿ ಕರದಿಟ್ಟುಕೊಳ್ಳಬೇಕು. ನಂತರ ಒಲೆಯ ಮೇಲೆ ಒಂದು ಪ್ಯಾನ್ ಇಟ್ಟು, ಅದಕ್ಕೆ ಎರಡು ಟೇಬಲ್ ಚಮಚ ಎಣ್ಣೆ ಹಾಕಿ ಅದು ಕಾದ ನಂತರ, ಮೊದಲಿಗೇ ಸಣ್ಣಗೆ ಹೆಚ್ಚಿಟ್ಟುಕೊಂಡ ಈರುಳ್ಳಿ ಹಾಕಿ ತಾಳಿಸಬೇಕು. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಿ ಕೈ ಆಡಿಸಿ, ದಪ್ಪ ಮೆಣಸಿನಕಾಯಿ ಸಣ್ಣಗೆ ಹೆಚ್ಚಿದ್ದು ಹಾಗು ಶುಂಠಿ ಬೆಳ್ಳುಳ್ಳಿ ಸಣ್ಣಗೆ ಹೆಚ್ಚಿದ್ದು ಹಾಕಬೇಕು. ಇನ್ನು ಇದೆಲ್ಲಾವನ್ನು ಚೆನ್ನಾಗಿ ತಾಳಿಸಿದ ನಂತರ ಕಾರ್ನ್ ಫ್ಲೋರ್ ನಲ್ಲಿ ಮೊದಲೇ ಕರಿದಿಟ್ಟುಕೊಂಡ ಆಲೂ ಹೋಳುಗಳನ್ನು ಹಾಕಬೇಕು. ಅದಕ್ಕೆ ಚಿಲ್ಲಿ ಸಾಸ್ ಒಂದು ಚಮಚ ಹಾಗು ಟೊಮೇಟೋ ಸಾಸ್ ಮೂರು ಚಮಚ ಕ್ರಮವಾಗಿ ಹಾಕಿ ಮಿಕ್ಸ್ ಮಾಡಬೇಕು. ಒಲೆಯನ್ನು ಆರಿಸಿ, ಪ್ಯಾನ್‌ನಲ್ಲಿ ತಾಳಿಸಿದ ಎಲ್ಲವನ್ನೂ ಒಂದು ಬೌಲ್‌ಗೆ ಸುರಿದುಕೊಂಡು ಅದರ ಮೇಲೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ, ಬಿಸಿಬಿಸಿಯಾದ ಆಲೂ ಮಂಚೂರಿ ಸವಿಯಲು ಸಿದ್ಧ. ಇದನ್ನು ಟೊಮೇಟೊ ಕೆಚಪ್ ಜೊತೆ ತಿಂದರೆ ಅದರ ರುಚಿ ದ್ವಗುಣವಾಗುವುದರಲ್ಲಿ ಸಂಶಯವೇ ಇಲ್ಲ. ಸಂಜೆ ಹೊತ್ತು ಚಹಾದೊಂದಿಗೆ ಈ ರೆಸಿಪಿ ಮಾಡಿ ತಿಂದರೆ ನಾಲಿಗೆಗೆ ರುಚಿ, ಮನಸ್ಸಿಗೆ ಮುದ ಕೊಡುತ್ತದೆ. ಈ ಆಲೂಗೆಡ್ಡೆಯಲ್ಲಿ ವಿಟಮಿನ್ ಬಿ6, ಬಿ3, ನಾರಿನಂಶ, ಪೊಟಾಶಿಯಮ್ ಮುಂತಾದ ಪೌಷ್ಟಿಕಾಂಶಗಳಿರುವುದರಿಂದ ಮಕ್ಕಳ ಬೆಳವಣಿಗೆಗೆ ಬಹಳ ಸಹಾಯಕಾರಿ.

See also  ಎಗ್ ಕ್ಯಾಬೇಜ್ ಮಿಕ್ಸ್ ಪಲ್ಯ ಮಾಡಿ ನೋಡಿ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು