News Kannada
Thursday, February 09 2023

ಅಡುಗೆ ಮನೆ

ಟೊಮೇಟೊ ಬೆಳ್ಳುಳ್ಳಿ ಚಟ್ನಿ

Photo Credit :

ಟೊಮೇಟೊ ಬೆಳ್ಳುಳ್ಳಿ ಚಟ್ನಿ

ಹಲವು ವಿಧದ ಚಟ್ನಿಗಳನ್ನು ತಯಾರಿಸಿ ಸವಿಯಬಹುದು. ಆದರೆ ಟೊಮೇಟೊ ಚಟ್ನಿಯ ರುಚಿಯೇ ಬೇರೆ. ಟೊಮೇಟೋ ಬೆಳ್ಳುಳ್ಳಿ ಚಟ್ನಿಯಿಂದ ದೋಸೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಬನ್ನಿ ನಾವು ಇವತ್ತು ಟೊಮೇಟೊ ಬೆಳ್ಳುಳ್,ಳಿ ಚಟ್ನಿ ತಯಾರಿಸಿ ಸವಿಯೋಣ.
ಬೇಕಾಗುವ ಸಾಮಾಗ್ರಿಗಳು
*ಟೊಮೇಟೊ – 1 ಕಪ್ (ಸಣ್ಣದಾಗಿ ಹೆಚ್ಚಿರುವಂತಹದ್ದು)
*ಬೆಳ್ಳುಳ್ಳಿ – 1 ಚಮಚ (ಸಣ್ಣದಾಗಿ ಹೆಚ್ಚಿದ್ದು)
*ಎಣ್ಣೆ – 1 ಚಮಚ
*ಸ್ಪ್ರಿಂಗ್ ಈರುಳ್ಳಿ – 1/4 ಕಪ್
*ಕಾಶ್ಮೀರಿ ಕೆಂಪು ಮೆಣಸು – 2 (ನೀರಿನಲ್ಲಿ ನೆನೆಸಿ ಹೆಚ್ಚಿದ್ದು)
*ಟೊಮೇಟೊ ಕೆಚಪ್ – 1 ಚಮಚ
*ಸ್ಪ್ರಿಂಗ್ ಈರುಳ್ಳಿ (ಹಸಿರು) – 1 ಚಮಚ (ಚಿಕ್ಕದಾಗಿ ಹೆಚ್ಚಿದ್ದು)
*ಕೊತ್ತಂಬರಿ – 1 ಚಮಚ (ಚಿಕ್ಕದಾಗಿ ಕತ್ತರಿಸಿದ್ದು)
*ಉಪ್ಪು ರುಚಿಗೆ ತಕ್ಕಷ್ಟು   

ಮಾಡುವ ವಿಧಾನ :  ಮೊದಲು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ ಮತ್ತು ಸ್ಪ್ರಿಂಗ್ ಈರುಳ್ಳಿ ಅನ್ನು ಇದಕ್ಕೆ ಹಾಕಿ. ಚೆನ್ನಾಗಿ ಹುರಿದುಕೊಳ್ಳಿ. ಇದಕ್ಕೆ ಬೆಳ್ಳುಳ್ಳಿಯನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ, ಆದರೆ ಹೆಚ್ಚು ಹುರಿದುಕೊಳ್ಳಬೇಡಿ. ಇಲ್ಲದಿದ್ದರೆ ಚಟ್ನಿ ಕಹಿಯಾಗುತ್ತದೆ. ಈಗ, ನೆನೆಸಿದ ಕೆಂಪು ಮೆಣಸನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರ ಮಾಡಿ. ನಿಮಗೆ ಟೊಮೇಟೊ ಬೇಯಲು ನೀರು ಬೇಕು ಎಂದಾದಲ್ಲಿ ನೀರು ಸೇರಿಸಿ. ಮತ್ತು ಹೆಚ್ಚಿನ ಉರಿಯಲ್ಲಿ ಬೇಯಿಸಿ.  ಇನ್ನು ಟೊಮೇಟೊವನ್ನು ಬೇಯಿಸುವಾಗ ಅದನ್ನು ಹಿಸುಕಲು ಮರೆಯದಿರಿ. ಟೊಮೇಟೊ ಕೆಚಪ್ ಮತ್ತು ಉಪ್ಪು ಹಾಕಿ. ಟೊಮೇಟೊ ಕೆಚಪ್ ಚಟ್ನಿಗೆ ಉತ್ತಮ ಸ್ವಾದವನ್ನು ಒದಗಿಸಲಿದೆ. ಇಷ್ಟೆಲ್ಲಾ ಆದನಂತರ, ಎಲ್ಲವನ್ನೂ ಮಿಶ್ರ ಮಾಡಿಕೊಳ್ಳಿ ಮತ್ತು ಸ್ಟವ್ ಆಫ್ ಮಾಡಿ. ಚಟ್ನಿ ಸಂಪೂರ್ಣವಾಗಿ ತಣ್ಣಗಾಗಿದೆ ಎಂದಾದಲ್ಲಿ, ಇದಕ್ಕೆ ಸ್ಪ್ರಿಂಗ್ ಈರುಳ್ಲಿ ಹಾಕಿ ಮತ್ತು ಕೊತ್ತಂಬರಿ ಸೇರಿಸಿ. ಟೊಮೇಟೊ ಬೆಳ್ಳುಳ್ಳಿ ಚಟ್ನಿ ಸೇವಿಸಲು ಸಿದ್ಧವಾಗಿದೆ.

See also  ಸಂಜೆ ಟೀ ಜೊತೆ ಸವಿಯಿರಿ ಮಸಾಲಾ ಪಾಪಡ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು