ಹಣ್ಣುಗಳಿಂದಲೂ ವಿಶೇಷ ತಿಂಡಿಗಳನ್ನು ತಯಾರಿಸಿ ಮನೆ ಮಂದಿಯೆಲ್ಲ ಒಟ್ಟಿಗೆ ಕುಳಿತು ಸವಿಯಬಹುದು. ಬನ್ನಿ ನಾವು ಇವತ್ತು ಬನಾನ ಬ್ರೆಡ್ ಫುಡ್ಡಿಂಗ್ ತಯಾರಿಸೋಣ.
ಬೇಕಾಗುವ ಸಾಮಾಗ್ರಿಗಳು:1.ಬ್ರೆಡ್ – 6 ಸ್ಲೈಸ್
2.ಬಾಳೆಹಣ್ಣು – 3
3.ಮೊಟ್ಟೆ – 3
4.ದಾಲ್ಚಿನ್ನಿ ಪೌಡರ್ – 1 tsp.
5.ವೆನಿಲಾ ಎಸೆನ್ಸ್ – 1 tbsp.
6.ಚಾಕೊಲೆಟ್ ಚಿಪ್ಸ್ – 1 ಕಪ್
7.ಹಾಲು – 1 ಕಪ್
ಮಾಡುವ ವಿಧಾನ
ಬ್ರೆಡ್ ಸ್ಲೈಸ್ಅನ್ನು ಸಣ್ಣ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ. ಓವನ್ ಟ್ರೇನಲ್ಲಿ ಪಾರ್ಚ್ಮೆಂಟ್ ಪೇಪರ್ ಹರಡಿ ಅದರಲ್ಲಿ ಬ್ರೆಡ್ ತುಂಡುಗಳನ್ನು ಒಂದರ ಪಕ್ಕ ಒಂದು ಜೋಡಿಸಿ 175 ಡಿಗ್ರಿ ಸೆಂಟಿಗ್ರೇಡ್ನಲ್ಲಿ 5 ನಿಮಿಷ ಬೇಕ್ ಮಾಡಿ. ಬೌಲ್ನಲ್ಲಿ ಮೊಟ್ಟೆ ಬೀಟ್ ಮಾಡಿ ವಿಸ್ಕ್ ಮಾಡಿಕೊಳ್ಳಿ. ಮತ್ತೊಂದು ಬೌಲ್ನಲ್ಲಿ ಬಾಳೆಹಣ್ಣನ್ನು ಮ್ಯಾಶ್ ಮಾಡಿಕೊಂಡು ಅದರೊಂದಿಗೆ ಬೀಟ್ ಮಾಡಿದ ಮೊಟ್ಟೆ, ಹಾಲು, ದಾಲ್ಚಿನ್ನಿ ಪೌಡರ್, ವೆನಿಲಾ ಎಸೆನ್ಸ್ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಬೇಕ್ ಆದ ಬ್ರೆಡ್ ತುಂಡುಗಳನ್ನು ಮಿಶ್ರಣದೊಂದಿಗೆ ಬೆರೆಸಿ 10 ನಿಮಿಷ ಬಿಡಿ. ನಂತರ ಚಾಕೊಲೆಟ್ ಚಿಪ್ಸ್ಅನ್ನು ಮಿಕ್ಸ್ ಮಾಡಿ ಮಿಶ್ರಣವನ್ನು ಮಫಿನ್ ಮೌಲ್ಡ್ಗೆ ವರ್ಗಾಯಿಸಿ, 180 ಡಿಗ್ರಿ ಪ್ರೀ ಹೀಟ್ ಮಾಡಿದ ಓವನ್ನಲ್ಲಿ 20 ನಿಮಿಷ ಬೇಕ್ ಮಾಡಿ. ಬನಾನ ಬ್ರೆಡ್ ಪುಡ್ಡಿಂಗ್ಅನ್ನು ವೆನಿಲಾ ಐಸ್ಕ್ರೀಮ್ ಅಥವಾ ಚಾಕೊಲೆಟ್ ಸಾಸ್ನೊಂದಿಗೆ ಸರ್ವ್ ಮಾಡಿ.