News Kannada
Monday, August 08 2022

ಅಡುಗೆ ಮನೆ

ಚಿಕನ್ ಕಡ್ಡಿ - 1 min read

ಚಿಕನ್ ಕಡ್ಡಿ

ಕೋಳಿಮಾಂಸ ಪ್ರಿಯರಿಗೆ ಈ ವೈವಿಧ್ಯತೆ ತುಂಬಾ ಇಷ್ಟವಾಗಿದ್ದು ಯಾವ ಊರಿಗೆ ಹೋದರೂ ಅಲ್ಲಿ ಯಾವ ಹೊಸ ಬಗೆಯ ರುಚಿ ಸಿಗುತ್ತದೆ ಎಂಬ ಹಂಬಲದಲ್ಲಿರುತ್ತಾರೆ. ಒಂದು ವೇಳೆ ನೀವೂ ಹೊಸರುಚಿಯನ್ನು ಇಷ್ಟಪಡುವವರದರೆ ನಿಮಗೊಂದು ಸಿಹಿಸುದ್ದಿಯಿದೆ. ಇಂದು ನಾವು ಚಿಕನ್ ಕಡ್ಡಿ ಹೇಗೆ ತಯಾರಿಸುವುದು ಎಂಬುದನ್ನು ತಿಳಿಯಪಡಿಸುತ್ತೇವೆ.

ಬೇಕಾಗುವ ಸಾಮಾಗ್ರಿಗಳು:
*ಕೋಳಿಮಾಂಸದ ಮೂಳೆರಹಿತ ಭಾಗವನ್ನು ಉದ್ದಕ್ಕೆ ಸೀಳಿದ್ದು- ಅರ್ಧ ಕೇಜಿ
*ಗರಂ ಮಸಾಲೆ ಪುಡಿ – 1 ಚಿಕ್ಕ ಚಮಚ
*ತಾಜಾ ಕ್ರೀಂ – 1 ಕಪ್
*ಹಸಿಮೆಣಸು – 5 ರಿಂದ 6
*ಬೆಳ್ಳುಳ್ಳಿಯ ಪೇಸ್ಟ್-1/2 ಚಿಕ್ಕ ಚಮಚ
*ಜೋಳದಹಿಟ್ಟು (cornflour) – 1 Cup
*ಇಂಗು-ಚಿಟಿಕೆಯಷ್ಟು
*ಜೀರಿಗೆ ಪುಡಿ – 1/2 ಚಿಕ್ಕ ಚಮಚ
*ಕೊತ್ತಂಬರಿ ಪುಡಿ – 1/2 ಚಿಕ್ಕ ಚಮಚ
*ಕೆಂಪು ಮೆಣಸಿನ ಪುಡಿ (ಬ್ಯಾಡಗಿ) – 1/2 ಚಿಕ್ಕ ಚಮಚ (ಕಾಶ್ಮೀರಿ ಚಿಲ್ಲಿ ಆದರೆ ಉತ್ತಮ, ಆದರೆ ಒಂದು ಚಿಕ್ಕ ಚಮಚ ಬಳಸಿ)
*ಲಿಂಬೆರಸ – 1/2 ಚಿಕ್ಕ ಚಮಚ
*ಬ್ರೆಡ್ ಪುಡಿ (bread crumbs)-ಅಗತ್ಯಕ್ಕೆ ತಕ್ಕಂತೆ
*ಉಪ್ಪು: ರುಚಿಗನುಸಾರ
*ಎಣ್ಣೆ: ಅಗತ್ಯಕ್ಕೆ ತಕ್ಕಂತೆ     
ತಯಾರಿಸುವ ವಿಧಾನ: ಒಂದು ಪಾತ್ರೆಯಲ್ಲಿ ಜೀರಿಗೆ ಪುಡಿ, ಧನಿಯ ಪುಡಿ, ಕೆಂಪು ಮೆಣಸಿನ ಪುಡಿ, ಬೆಳ್ಳುಳ್ಳಿ ಪೇಸ್ಟ್ ಮತ್ತು ಜೋಳದಹಿಟ್ಟನ್ನು ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಕೋಳಿಮಾಂಸದ ಉದ್ದಕ್ಕೆ ಕುಯ್ದ ತುಂಡುಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಹಸಿಮೆಣಸು ಮತ್ತು ಲಿಂಬೆರಸ ಸೇರಿಸಿ ಬೆರೆಸಿ. ಬಳಿಕ ಕ್ರೀಂ ಅನ್ನು ಪ್ರತಿ ತುಂಡಿಗೂ ನಯವಾಗಿ ಸವರಿ. ಈ ಸಮಯದಲ್ಲಿ ಒಂದು ದಪ್ಪತಳದ ಬಾಣಲೆಯನ್ನು ಮಧ್ಯಮ ಉರಿಯಲ್ಲಿಟ್ಟು ಹುರಿಯಲು ಅಗತ್ಯವಿದ್ದಷ್ಟು ಎಣ್ಣೆಯನ್ನು ಸುರಿದು ಬಿಸಿಮಾಡಿ. ಎಣ್ಣೆ ಬಿಸಿಯಾದ ಬಳಿಕ ಕೋಳಿಯ ತುಂಡುಗಳನ್ನು ಒಂದು ತಟ್ಟೆಯಲ್ಲಿ ಹರಡಿರುವ ಬ್ರೆಡ್ ಪುಡಿಯ ಮೇಲೆ ಹೊರಳಾಡಿಸಿ ಎಲ್ಲಾ ಕಡೆ ಸಮನಾಗಿ ಮತ್ತು ದಪ್ಪನಾಗಿ ಅಂಟಿಕೊಳ್ಳುವಂತೆ ಮಾಡಿ ಬಳಿಕ ಬಾಣಲೆಯಲ್ಲಿ ಮುಳುಗಿಸಿ. ಇದೇ ರೀತಿ ಇತರ ತುಂಡುಗಳನ್ನೂ ಒಂದಾದ ಬಳಿಕ ಒಂದರಂತೆ ಎಣ್ಣೆಯಲ್ಲಿ ಮುಳುಗಿಸುತ್ತಾ ಹೋಗಿ. 8 ಎರಡೂ ಬದಿ ಮಗುಚುತ್ತಾ ಸುಮಾರು ಕಂದು ಮಿಶ್ರಿತ ಕೆಂಪು ಬಣ್ಣ ಬರುವರೆಗೂ ಹುರಿಯಿರಿ.  ಹೊರತೆಗೆದ ಬಳಿಕ ದಪ್ಪನೆಯ ಕಿಚನ್ ಟವೆಲ್ ಪೇಪರ್ ಮೇಲೆ ಹರಡಿ ಎಣ್ಣೆ ಹೀರಿಕೊಳ್ಳುವಂತೆ ಮಾಡಿ. ಬಿಸಿಯಿದ್ದಂತೆಯೇ ಬಡಿಸಿ.  ಗರಿಗರಿಯಾಗಿರುವ ಈ ಕಡ್ಡಿಗಳನ್ನು ಟೊಮಾಟೋ ಸಾಸ್ ಚಿಲ್ಲಿ ಸಾಸ್ ಜೊತೆಯೂ ಸೇವಿಸಬಹುದು.

See also  ಹೆಸರುಬೇಳೆ ಪಾಯಸ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು