ಕರಾವಳಿ ಭಾಗದ ಜನರಿಗೆ ಮೀನು ಇಲ್ಲದೆ ಊಟನೇ ಸೇರಲ್ಲ ಎನ್ನುವ ಮಾತಿದೆ. ಕರಾವಳಿ ಜನರು ಮೀನು ತಿನ್ನುವುದನ್ನು ನೋಡಿ ಇತರರು ಬೆಕ್ಕಸ ಬೆರಗಾಗುವರು. ಭಾರತದಲ್ಲಿ ಕರಾವಳಿ ಭಾಗದ ಜನರು ಮಾಡುವಂತಹ ಮೀನಿನ ಖಾದ್ಯವು ಒಂದೊಂದು ರುಚಿಯಲ್ಲಿರುವುದು. ಇಲ್ಲಿ ನೀವು ಲೆಮನ್, ಪೆಪ್ಪರ್ ಫಿಶ್ ಫ್ರೈ(ಲಿಂಬೆ, ಕರಿಮೆಣಸು ಹಾಕಿ ಮೀನಿನ ಫ್ರೈ) ತಯಾರಿಸುವುದು ಹೇಗೆ ಎಂದು ತಿಳಿದುಕೊಳ್ಳಬಹುದು. ಲೆಟ್ಸ್ ಟ್ರೈ….
ಬೇಕಾಗುವ ಸಾಮಗ್ರಿಗಳು
* 400-500 ಗ್ರಾಂ ಅಂಜಲ್(ಕಿಂಗ್ ಫಿಶ್) ಮೀನು
* 1 ಚಮಚ ಕರಿಮೆಣಸು
* 1/2 ಚಮಚ ಜೀರಿಗೆ
* 2 ಎಸಲು ಕರಿಬೇವಿನ ಎಲೆ
* 1-2 ಹಸಿ ಮೆಣಸು ಉದ್ದಕ್ಕೆ ಸೀಳಿ ತುಂಡರಿಸಿರುವುದು.
* 1-2 ಚಮಚ ಎಣ್ಣೆ ಅಥವಾ ಬೆಣ್ಣೆ
* 1/2 ದಿಂದ 3/4 ಚಮಚ ಗರಂ ಮಸಾಲ(ಅಗತ್ಯವೇನಿಲ್ಲ)
ಮ್ಯಾರಿನೇಟ್ ಮಾಡಲು
*1 ಚಮಚ ಲಿಂಬೆ ರಸ
*1/4 ಚಮಚ ಅರಶಿನ
*1/2 ಚಮಚ ಕೆಂಪು ಮೆಣಸಿನ ಹುಡಿ
* ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವ ವಿಧಾನ
1. ಒಂದು ಸಣ್ಣ ಗಾತ್ರದ ಅಂಜಲ್(ಕಿಂಗ್ ಫಿಶ್)ನ್ನು ಸ್ವಚ್ಛ ಮಾಡಿಕೊಂಡು ಅದನ್ನು ತುಂಡು ಮಾಡಿ. ಅದಕ್ಕೆ ಅರಶಿನ, ಮೆಣಸಿನ ಹುಡಿ, ಸ್ವಲ್ಪ ಉಪ್ಪು ಮತ್ತು ಲಿಂಬೆ ರಸ ಹಾಕಿಕೊಂಡು 15-30 ನಿಮಿಷ ಕಾಲ ಹಾಗೆ ಬಿಡಿ.
2. ಜೀರಿಗೆ ಮತ್ತು ಕರಿಮೆಣಸನ್ನು ಸರಿಯಾಗಿ ಹುಡಿ ಮಾಡಿಕೊಳ್ಳಿ. ಕುಟ್ಟಿ ಮಾಡಿದಂತಹ ಹುಡಿ ಬಳಸಬಹುದು.
3. ಸ್ವಲ್ಪ ತುಪ್ಪ ಹಾಕಿ ತವಾ ಬಿಸಿ ಮಾಡಿ. ಅಗಲವಾದ ತವಾ ಬಳಸಿ. ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಮತ್ತು ಹಸಿ ಮೆಣಸು ಹಾಕಿ ವಾಸನೆ ಹೋಗುವ ತನಕ ಹುರಿಯಿರಿ.
4. ಇದಕ್ಕೆ ಮೀನು ಹಾಕಿ ಮಧ್ಯಮ ಬೆಂಕಿಯಲ್ಲಿ ಕಾಯಿಸಿ.
5. ಎರಡು ಬದಿ ಬೇಯುವಂತೆ 2-3 ನಿಮಿಷ ಬೇಯಿಸಿ.
6. ಇದಕ್ಕೆ ಕರಿಬೇವಿನ ಎಲೆ ಮತ್ತು ಉಳಿದಿರುವ ಕರಿಮೆಣಸಿನ ಹುಡಿ ಹಾಕಿ. ಮತ್ತೆ 2 ನಿಮಿಷ ಬೇಯಲಿ.
7. ಮೀನುಗಳನ್ನು ಮತ್ತೊಂದು ಬದಿಗೆ ತಿರುಗಿಸಿ ಕರಿಬೇವಿನ ಎಲೆ ಮತ್ತು ಕರಿಮೆಣಸಿನ ಹುಡಿ ಹಾಕಿ.