ಚಿಕನ್ ಸ್ಪೈಸಿ ಫ್ರೈ ಒಂದಿಷ್ಟು ಮಸಾಲೆಯೊಂದಿಗೆ ಸ್ಪಲ್ಪ ಖಾರವಾಗಿದ್ದರೆ ಸೇವಿಸಲು ಮಜಾ ಸಿಗುತ್ತದೆ. ಮಾಂಸವನ್ನು ಮಸಾಲೆಯೊಂದಿಗೆ ಬಾಣಲಿಯಲ್ಲಿ ಕಾಯಿಸಿ ಸೇವಿಸಿದರೆ ಅದರ ರುಚಿ ಮಸ್ತಾಗಿರುತ್ತದೆ.
ಚಿಕನ್ ಸ್ಪೈಸಿ ಫ್ರೈ ತಯಾರಿಸಲು ಬೇಕಾಗುವ ಪದಾರ್ಥಗಳು
ಚಿಕನ್- ಒಂದು ಕೆಜಿ
ಬೆಳ್ಳುಳ್ಳಿಶುಂಠಿ ಪೇಸ್ಟ್- ಎರಡು ಚಮಚ
ಜೀರಿಗೆಪುಡಿ- ಒಂದು ಚಮಚ
ಅರಿಶಿಣಪುಡಿ- ಅರ್ಧ ಚಮಚ
ಮೆಣಸಿನಪುಡಿ- ಒಂದೂವರೆ ಚಮಚ
ತಂದೂರಿ ಬಣ್ಣ- ಚಿಟಿಕೆಯಷ್ಟು
ಗರಂಮಸಾಲೆ- ಒಂದು ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಎಣ್ಣೆ- ಸ್ವಲ್ಪ
ಕೊತ್ತಂಬರಿ ಸೊಪ್ಪು- ಸ್ವಲ್ಪ
ಚಿಕನ್ ಸ್ಪೈಸಿ ಫ್ರೈ ಮಾಡುವ ವಿಧಾನ ಹೀಗಿದೆ
ಮೊದಲಿಗೆ ಮೂಳೆರಹಿತ ಚಿಕನ್‍ನ ಮಾಂಸದ ತುಂಡುಗಳನ್ನು ತೆಗೆದು ಪಾತ್ರೆಯಲ್ಲಿ ಹಾಕಿ ಅದಕ್ಕೆ ವಿನಿಗಾರ್, ಬೆಳ್ಳುಳ್ಳಿ ಶುಂಠಿಪೇಸ್ಟ್, ಜೀರಿಗೆ, ಅರಶಿಣ, ಮೆಣಸಿನಪುಡಿ, ಗರಂ ಮಸಾಲೆ, ತಂದೂರಿ ಬಣ್ಣ, ಉಪ್ಪು ಎಲ್ಲವನ್ನೂ ಹಾಕಿ ಚೆನ್ನಾಗಿ ಮಿಶ್ರ ಮಾಡಿ ಸ್ವಲ್ಪ ಹೊತ್ತು ಬಿಡಬೇಕು.
ಆ ನಂತರ ಅದನ್ನು ಪಾತ್ರೆಯಲ್ಲಿ ಹಾಕಿ ಸ್ವಲ್ಪ ಹೊತ್ತು ಬೇಯಿಸಿ ನೀರೆಲ್ಲ ಆವಿಯಾದ ಬಳಿಕ ಇಳಿಸಿಡಿ. ತಣ್ಣಗಾದ ಬಳಿಕ ಕಾವಲಿ ಅಥವಾ ತಾವಾದಲ್ಲಿ ಎಣ್ಣೆ ಹಾಕಿ ಅದರಲ್ಲಿ ಚಿಕನ್ ಚೂರುಗಳನ್ನು ಸ್ವಲ್ಪ ಸ್ವಲ್ಪವೇ ಹಾಕಿ ಕಂದು ಬಣ್ಣ ಬರೋವರೆಗೆ ಹುರಿಯಿರಿ ಬಳಿಕ ತಟ್ಟೆಗೆ ಹಾಕಿ ಅದರ ಮೇಲೆ ಕೊತ್ತಂಬರಿ ಸೊಪ್ಪು, ಹಚ್ಚಿದ ಈರುಳ್ಳಿ ಉದುರಿಸಿ ಅಲ್ಲಿಗೆ ಚಿಕನ್ ಸ್ಪೈಸಿ ಫ್ರೈ ರೆಡಿ. ಹುಳಿಯ ಅಗತ್ಯವಿದ್ದರೆ ನಿಂಬೆ ಹಣ್ಣಿನ ರಸ ಹಿಂಡಿಕೊಳ್ಳಬಹುದು.