News Kannada
Sunday, December 04 2022

ಅಡುಗೆ ಮನೆ

ಸಿಂಪಲ್ ಫಿಶ್ ಫಿಂಗರ್ಸ್ ಮಾಡಿ ನೋಡಿ!

Photo Credit :

ಮೀನಿನಿಂದ ಹಲವು ರೀತಿಯ ಪದಾರ್ಥಗಳನ್ನು ತಯಾರಿಸಬಹುದಾಗಿದ್ದು, ಅದರಲ್ಲಿ ಫಿಶ್ ಫಿಂಗರ್ಸ್ ಕೂಡ ಒಂದಾಗಿದೆ. ಇದನ್ನು ತಯಾರಿ ಮಾಡುವುದು ಅಷ್ಟೇನು ಕಷ್ಟವಲ್ಲ. ಹಾಗಾದರೆ ಇದಕ್ಕೆ ಬೇಕಾಗುವ ಮಸಾಲೆ ಮತ್ತು ತಯಾರು ಮಾಡುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು

ಮೀನು: ಅರ್ಧ ಕೆಜಿ

ಬೆಳ್ಳುಳ್ಳಿ ಶುಂಠಿ ಪೇಸ್ಟ್: ಒಂದು ಟೀ ಚಮಚೆ

ಅರಸಿನ ಪುಡಿ: ಕಾಲು ಟೀ ಚಮಚೆ

ಜೀರಿಗೆ ಪುಡಿ: ಒಂದು ಟೀ ಚಮಚೆ

ಮೆಣಸಿನಪುಡಿ: ಎರಡು ಟೀ ಚಮಚೆ

ಉಪ್ಪು: ರುಚಿಗೆ ತಕ್ಕಷ್ಟು

ವಿನೆಗಾರ್: ಒಂದು ಟೇಬಲ್ ಚಮಚೆ

ಮೊಟ್ಟೆ: ಎರಡು

ಬ್ರೆಡ್ ಚೂರು: ಒಂದು ಬಟ್ಟಲು

ಎಣ್ಣೆ: ಕರಿಯಲು ಅಗತ್ಯವಿರುವಷ್ಟು

ತಯಾರು ಮಾಡುವ ವಿಧಾನ

ಮೊದಲಿಗೆ ಮುಳ್ಳಿಲ್ಲದ ಮಾಂಸ ಖಂಡಗಳನ್ನು ಹೊಂದಿದ ಮೀನನ್ನು ತೆಗೆದುಕೊಂಡು ಅದನ್ನು ಬೆರಳಿನ ಗಾತ್ರಕ್ಕೆ ತುಂಡುಗಳಾಗಿ ಮಾಡಿಕೊಳ್ಳಬೇಕು. ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಬೆಳ್ಳುಳ್ಳಿ ಶುಂಠಿ ಪೇಸ್ಟ್, ಅರಸಿನ, ಜೀರಿಗೆ, ಮೆಣಸಿನ ಪುಡಿ, ಉಪ್ಪು, ವಿನೆಗಾರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಇದಕ್ಕೆ ಮೀನನ್ನು ಹಾಕಿ ಚೆನ್ನಾಗಿ ಕಲೆಸಬೇಕು. ಹೀಗೆ ಕಲೆಸಿದ ಮೀನನ್ನು ಸುಮಾರು ಅರ್ಧ ಗಂಟೆಗಳಿಗೂ ಹೆಚ್ಚು ಕಾಲ ಇಡಬೇಕು.

ಮೀನಿಗೆ ಮಸಾಲೆ ಹಿಡಿದ ನಂತರ ಒಂದು ಪಾತ್ರೆಯಲ್ಲಿ ಹಸಿ ಮೊಟ್ಟೆಯನ್ನು ಹಾಕಿ ಅದನ್ನು ಚಮಚೆಯಿಂದ ಚೆನ್ನಾಗಿ ತಿರುಗಿಸಬೇಕು. ಆ ನಂತರ ಅದಕ್ಕೆ ಮೊದಲೇ ಮಸಾಲೆ ಮಿಶ್ರ ಮಾಡಿಟ್ಟ ಮೀನನ್ನು ಅದ್ದಿ ತೆಗೆದು ಬ್ರೆಡ್ ಚೂರಿನಲ್ಲಿ ಉರುಳಿಸಿ ಎಣ್ಣೆಯಲ್ಲಿ ಕರಿದು ತೆಗೆದರೆ ಸಿಂಪಲ್ ಫಿಶ್ ಫಿಂಗರ್ಸ್ ರೆಡಿಯಾದಂತೆಯೇ…!

See also  ಸಿಂಪಲ್ ಆಗಿ ಮಾಡಿ ಸವಿಯಿರಿ ‘ಚಿಲ್ಲಿ ಗೋಬಿ’
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು